ಮಂಡ್ಯದಲ್ಲಿ 500 ಬಾಳೆ ಹಣ್ಣಿನ ಗೊನೆ ಬೆಳೆದ ಮಾದರಿ ರೈತ!

ಹೊಸದಿಗಂತ ವರದಿ, ಮಂಡ್ಯ :

ತಾಲೂಕಿನ ಹೊಳಲು ಗ್ರಾಮದ ರೈತ ಎಚ್.ವೈ. ಶಿವಕುಮಾರ್ (ಎಲ್ಲೇಗೌಡ) ಅವರು ಮನೆಯಂಗಳದಲ್ಲಿ ಒಂದೇ ಗಿಡದಲ್ಲಿ ಸುಮಾರು 500 ಬಾಳೆ ಹಣ್ಣುಗಳನ್ನು ಬೆಳೆದು ಮಾದರಿ ರೈತ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ತಮಿಳುನಾಡು ಪ್ರವಾಸಕ್ಕೆ ತೆರಳಿದ್ದ ವೇಳೆ ಎರಡು ಸಸಿಗಳನ್ನು ತಂದು ಮನೆಯಂಗಳದಲ್ಲಿ ಒಳ್ಳೆಯ ಫಲಸು ಬಂದರೆ ಗದ್ದೆಯಲ್ಲಿ ಬೆಳೆಯಲು ನಿರ್ಧರಿಸಿದ್ದರು. ಈಗ ಬಾಳೆ ಉತ್ತಮವಾಗಿ ಬೆಳೆದು ಸುಮಾರು 500 ಹಣ್ಣುಗಳ ಗುಣಮಟ್ಟದ ಗೊನೆ ಬೆಳೆದುನಿಂತಿದೆ.

ಮಂಡ್ಯದವರು ಕಬ್ಬು ಮತ್ತು ಭತ್ತಕ್ಕೇ ಅಂಟಿಕೊಂಡಿದ್ದಾರೆ. ಇದರ ಬದಲು ತೋಟಗಾರಿಕೆಯಂತಹ ಆರ್ಥಿಕ ಬೆಳೆಗಳನ್ನು ಬೆಳೆದು ಸ್ವಾವಲಂಭಿ ರೈತರಾಗಬೇಕು. ಜೊತೆಗೆ ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!