ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ಲಕ್ಷ ರೂಪಾಯಿಯ ನಾಯಿಮರಿಯನ್ನು ಕೊಡಿಸುವಂತೆ ಮಗ ಪೀಡಿಸಿದ್ದು, ಮಗನ ಕಾಟ ತಾಳಲಾರದೆ ತಾಯಿ ಮನೆ ಬಿಟ್ಟು ಹೋಗಿದ್ದಾರೆ. ತಾಯಿ ಮನೆಬಿಟ್ಟು ಹೋಗಿದ್ದಕ್ಕೆ ನೋವಿನಿಂದ ಮಗನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಹುಬ್ಬಳ್ಳಿಯ ಮಿಷನ್ ಕಾಂಪೌಂಡ್‌ನಲ್ಲಿ ಘಟನೆ ನಡೆದಿದ್ದು, ಅಲೆನ್ ವಿನೋದ್ ಭಸ್ಮೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿಯನ್ನು ನಾಯಿಮರಿ ಕೊಡಿಸುವಂತೆ ಮಗ ಪೀಡಿಸುತ್ತಿದ್ದ. ನಾಯಿಮರಿ ತುಂಬಾ ದುಬಾರಿ ಎಂದು ತಾಯಿ ಹೇಳಿದ್ದರು. ಆದರೆ ಮಗನಿಗೆ ನಾಯಿ ಬೇಕು ಎನ್ನುವ ಹಠ ಶುರುವಾಗಿತ್ತು. ಮಗನ ಕಾಟ ತಾಳಲಾರದೆ ತಾಯಿ ಮನೆ ಬಿಟ್ಟು ಹೋಗಿದ್ದಾರೆ.
ನನ್ನಿಂದ ತಾಯಿ ಮನೆ ಬಿಟ್ಟು ಹೋಗವಂತಾಯ್ತು ಎಂಬ ಬೇಸರದಲ್ಲಿ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿಯನ್ನು ನೋಯಿಸಿ ಅವರು ಮನೆ ಬಿಟ್ಟು ಹೋಗುವಂತೆ ಮಾಡಿದ್ದೇನೆ ಎನ್ನುವ ನೋವಿನಲ್ಲಿ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.