April 11, 2026
Saturday, April 11, 2026
spot_img

ಹಾಲು ಉಕ್ಕೀತೆಂದು ಒಲೆ ಆಫ್‌ ಮಾಡಲು ಹೋದ ಅಮ್ಮ, ಅಷ್ಟರಲ್ಲೇ ಮಹಡಿಯಿಂದ ಬಿದ್ದ ಒಂದು ವರ್ಷದ ಮಗು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ನಾಯಂಡಳ್ಳಿಯ ಮನೆಯೊಂದರಲ್ಲಿ ಒಂದು ವರ್ಷದ ಮಗು ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದೆ.

ಮಗು ಸಹನಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ನವೀನ್‌ ಹಾಗೂ ಜಯಶ್ರೀ ದಂಪತಿಯ ಕಂದಮ್ಮ ಸಹನಾ ತಾಯಿ ಜೊತೆ ಆಟವಾಡುತ್ತಿದ್ದಳು.ಒಲೆ ಮೇಲೆ ಹಾಲು ಇಟ್ಟಿದ್ದು ನೆನಪಾಗಿ ಜಯಶ್ರೀ ಒಂದು ನಿಮಿಷ ಮಗುವನ್ನು ಬಿಟ್ಟು ಓಡಿ ಹೋಗಿದ್ದಾರೆ.

ಆ ಒಂದು ನಿಮಿಷದಲ್ಲಿ ಸಹನಾ ಮಹಡಿಯಿಂದ ನೆಲಕ್ಕೆ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಈಗಾಗಲೇ ವೈದ್ಯರು ಮಗುವನ್ನು ಪ್ರಾಣಕ್ಕೆ ಯಾವ ಅಪಾಯವೂ ಇಲ್ಲ ಎಂದು ಹೇಳಿದ್ದಾರೆ.

ಮಹಡಿಯಿಂದ ಮಗು ಕೆಳಗಡೆ ಬಿದ್ದಿದ್ದನ್ನು ಕಂಡ ರಸ್ತೆಯಲ್ಲಿ ತೆರಳುತ್ತಿದ್ದ ಜನ ಕಿರುಚಾಡುತ್ತಿದ್ದಂತೆ ಹೊರಬಂದು ಮಗುವಿನ ಸ್ಥಿತಿ ಕಂಡ ಜಯಶ್ರೀ ಲೋ ಬಿಪಿ ಉಂಟಾಗಿ ಅಸ್ವಸ್ಥರಾಗಿದ್ದರು. ಸದ್ಯಕ್ಕೆ ಅವರೂ ಚೇತರಿಸಿಕೊಂಡಿದ್ದು, ದಂಪತಿಗೆ ಸಹನಾ ಏಕೈಕ ಮಗು ಎನ್ನಲಾಗಿದೆ. ಮಗು ಸಹಾನಳ ತಂದೆ ನವಿನ್​​ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !