ತೆರೆ ಮೇಲೆ ಬರಲಿದೆ ಶತಾಯುಷಿ ಶ್ರೀ ವಾದಿರಾಜ ತೀರ್ಥರ ಜೀವನಾಧಾರಿತ ಸಿನೆಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾವಿಸಮೀರ ಎಂದೇ ಖ್ಯಾತರಾಗಿದ್ದ, 14ನೇ ಶತಮಾನದಲ್ಲಿ ಉಡುಪಿಯ ಸೋದೆ ಮಠಾದೀಶ, ಶತಾಯುಷಿ ಶ್ರೀ ವಾದಿರಾಜ ತೀರ್ಥ ಸಾರ್ವಭೌಮರ ಜೀವನಾಧಾರಿತ ಸಿನೆಮಾ ಸೆಟ್ಟೆರುವುದಕ್ಕ ಸಿದ್ದತೆಗಳಾಗುತ್ತಿದೆ ಎಂದು ಸಿನೆಮಾದ ನಿರ್ದೇಶಕ, ನಾಗಿಣಿ ಧಾರವಾಹಿ ಖ್ಯಾತಿಯ ಹಯವದನ ತಿಳಿಸಿದರು.

ಅವರು ಗುರುವಾರ, ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥರ ಉಪಸ್ಥಿತಿಯಲ್ಲಿ, ವಾದಿರಾಜರ ಹುಟ್ಟೂರು ಕುಂದಾಪುರದ ಹೂವಿನಕೆರೆ ಮಠದಲ್ಲಿ ನಡೆದ, ವಾದಿರಾಜರ 542ನೇ ಜಯಂತೋತ್ಸವದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾಹಿತಿ ನೀಡಿದರು.

ಇದೊಂದು ಬಿಗ್ ಬಜೆಟ್ ಸಿನೆಮಾವಾಗಿದ್ದು, ವಾದಿರಾಜ ಶ್ರೀಗಳ ಜನನ, ಬಾಲ್ಯ, ಸಂನ್ಯಾಸ, ಸಾಮಾಜಿಕ ಪರಿವರ್ತನೆ, ಪವಾಡಗಳ ಬಗ್ಗೆ ಪ್ರೇಕ್ಷಕರಿಗೆ ಸಂತಸ, ಸಂದೇಶಗಳೆರಡೂ ಸಿಗುವಂತೆ, ಜನಪ್ರಿಯ ಶೈಲಿಯಲ್ಲಿ ಸಿನೆಮಾ ನಿರ್ಮಿಸಲಾಗುತ್ತದೆ. ಮುಂದಿನ ಜಯಂತ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು.

14 – 15ನೇ ಶತಮಾನದಲ್ಲಿ 120 ವರ್ಷಗಳ ಕಾಲ ಬದುಕಿದ್ದ ವಾದಿರಾಜರು 3 ಬಾರಿ ದೇಶ ಪರ್ಯಟನೆ ಮಾಡಿದ್ದರು. ಆದ್ದರಿಂದ 14ನೇ ಶತಮಾನದ ಕಾಲಘಟ್ಟ ಮತ್ತು ಸನ್ನಿವೇಶಗಳನ್ನು ನಿರ್ಮಿಸಿ, ಬಹುತೇಕ ಉಡುಪಿ ಹಾಗೂ ಅವರು ಸಂದರ್ಶಿದ ಸ್ಥಳಗಳಲ್ಲಿಯೂ ಚಿತ್ರೀಕರಣ ನಡಸಲಾಗುತ್ತದೆ. ಕನ್ನಡ ಚಿತ್ರರಂಗದ ಖ್ಯಾತನಾಮರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿಶ್ವವಲ್ಲಭ ತೀರ್ಥರು, 113 ವರ್ಷ ಸಂನ್ಯಾಸಾಶ್ರಮ ಆಚರಿಸಿದ ಏಕೈಕ ಯತಿ ವಾದಿರಾಜರ ಜೀವನವನ್ನು 3 ಗಂಟೆಗಳಲ್ಲಿ ತೋರಿಸುವುದು ದೊಡ್ಡ ಸವಾಲು, ಅಪಾರ್ಥಗಳಿಗೆ ಅವಕಾಸ ಇಲ್ಲದಂತೆ, ನೋಡುಗರಿಗೆ ಬೋರ್ ಹೊಡೆಸದಂತೆ, ಜನರಿಗೆ ಇಷ್ಟವಾಗುವಂತೆ ಸಂದೇಶ ನೀಡಬೇಕು ಎಂದು ಸಲಹೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕತೆ, ಚಿತ್ರಕತೆ ಬರೆಯುತ್ತಿರುವ ಸಾಹಿತಿ ವಿಕ್ರಮ್ ಹತ್ವಾರ್, ನಿರ್ಮಾಪಕ ಸಚಿನ್ ದೇಸಾಯಿ, ಪವನ್ ಸಿಮಿಕೇರಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!