ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ನಿಗೂಢ ಬಲೂನ್ ಒಂದು ಆಕಾಶದಿಂದ ಬಿದ್ದಿದೆ. ಬೃಹತ್ ಗಾತ್ರದ ಬಲೂನ್ ಜೊತೆಗೆ ಮಷಿನ್ ಕೂಡ ಇದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮನೆ ಮೇಲೆ ಬಿದ್ದಿರುವ ಬಲೂನ್ ಕಂಡು ನಿವಾಸಿಗಳು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಮಷೀನ್‌ನಿಂದ ರೆಡ್ ಲೈಟ್ ಬರುತ್ತಿರೋದ್ರಿಂದ ಗಾಬರಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸ್ತಿದ್ದಾರೆ.
ಬಲೂನ್ನಲ್ಲಿ ಕನ್ನಡದಲ್ಲಿ ಬರೆದಿರುವ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ‘ಇದರಲ್ಲಿ ವೈಜ್ಞಾನಿಕ ಉಪಕರಣಗಳಿವೆ. ಟಿಐಎಫ್‌ಆರ್ ಬಲೂನ್ ಸೌಲಭ್ಯ ಇದಾಗಿದೆ. ದಯವಿಟ್ಟು ಗಮನಿಸಿ ಕೆಳಗಿನ ಸೂಚನೆ ಪಾಲಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದೆ.
ಮಷೀನ್‌ನಲ್ಲಿ ಏನಿದೆ ಎಂದು ತೆಗೆದು ನೋಡಬೇಡಿ, ಇದರಲ್ಲಿರುವ ವಸ್ತುಗಳನ್ನು ಕಾಪಾಡಿ, ಈ ಉಪಕರಣ ಬಿದ್ದ ಜಾಗದಿಂದ ಕದಲಿಸಬೇಡಿ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಇಲ್ಲಿರುವ ನಂಬರ್‌ಗೆ ಕರೆ ಮಾಡಿ, ಉಪಕರಣ ತೆಗೆದು ನೋಡಿದವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಸೂಚನೆಯಲ್ಲಿ ಬರೆದಿದೆ.