ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ವರ್ಷಗಳಿಂದ ಪ್ರೀತಿಸಿ, ಸಂಭ್ರಮದಿಂದ ಹಸೆಮಣೆ ಏರಿದ ಹುಡುಗಿ, ಮೂರೇ ದಿನಕ್ಕೆ ತಾಯಿಯ ಮನೆ ಸೇರಿದ್ದು, ಮನನೊಂದ ರಾಷ್ಟ್ರೀಯ ಮಟ್ಟದ ಕಬಡಿ ಆಟಗಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಕ್ಕಮಗಳೂರಿನ ತೇಗೂರು ಗ್ರಾಮದ ವಿನೋದ್ ಮೃತ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ. ವಿನೋದ್ ಹಾಗೂ ತನುಜಾ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಮನೆಯವರು ಮದುವೆಗೆ ಒಪ್ಪದ ಕಾರಣ ಇಬ್ಬರೂ ದೇವಸ್ಥಾನಕ್ಕೆ ತೆರಳಿ ಮದುವೆ ಮಾಡಿಕೊಂಡಿದ್ದರು.
ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಈ ಜೋಡಿಯನ್ನು ಪೊಲೀಸರು ಠಾಣೆಗೆ ಕರೆಸಿದ್ದರು. ಯುವತಿಯ ಕುಟುಂಬದವರನ್ನು ಮಗಳನ್ನು ಮನೆಗೆ ಕಳಿಸುವಂತೆ ಹೇಳಿದ್ದು, ಪಂಚಾಯತಿ ವೇಳೆ ತಾಯಿ ಮನೆಗೆ ಹೋಗುವುದಾಗಿ ಹೇಳಿದ್ದರು.
ಗಂಡನ ಜೊತೆ ಇರದೆ ತಾಯಿ ಮನೆಗೆ ಹೋಗಲು ಯುವತಿ ನಿರ್ಧರಿಸಿದ ಕಾರಣ ವಿನೋದ್ ನೋವು ಅನುಭವಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.