ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ (ISRO) ಹೊಸ ವರ್ಷಕ್ಕೆ ಹೊಸ ಉತ್ಸಾಹದಿಂದ ವರ್ಷದ ಮೊದಲ ಉಪಗ್ರಹವನ್ನು ಉಡಾವಣೆ ಮಾಡಿದೆ.
ಕಪ್ಪುಕುಳಿ(Black hole)ಗಳ ಅಧ್ಯಯನಕ್ಕಾಗಿ ಎಕ್ಸ್‌ಪೋಸಾಟ್‌ನ್ನು( X-ray Polarimeter Satellite) ಪಿಎಸ್‌ಎಲ್‌ವಿ ಸಿ58 ( PSLV-58) ರಾಕೆಟ್ ಮೂಲಕ ಉಡಾವಣೆ ಮಾಡಿದೆ.
ಚಂದ್ರಯಾನ-3, ಸೂರ್ಯಯಾನ ಮೂಲಕ ಈಗಾಗಲೇ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿಸಿರುವ ಇಸ್ರೋ ಇಂದು ಬೆಳಗ್ಗೆ 9:10ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಕ್ಸ್‌ಪೋಸಾಟ್ ಉಪಗ್ರಹವನ್ನು ಉಡಾವಣೆ ಮಾಡಿದೆ.
ಆಕಾಶ ಮೂಲಗಳಿಂದ ಕ್ಷಕಿರಣ ಹೊರಸೂಸುವ ಬಾಹ್ಯಾಕಾಶ ಆಧಾರಿತ ಧ್ರುವೀಕರಣ ಮಾಪನಗಳಲ್ಲ ಸಂರ್ಶೋನೆ ನಡೆಸಲು ಇಸ್ರೋ ಸಜ್ಜಾಗಿದ್ದು, ಮೊದಲು ಎಕ್ಸ್‌ಪೋಸಾಟ್ ವೈಜ್ಞಾನಿಕ ಉಪಗ್ರಹ ಇದಾಗಿದೆ. ಪಿಎಸ್‌ಎಲ್‌ವಿ ರಾಕೆಟ್ ಉಪಗ್ರಹವನ್ನು ಪೂರ್ವಭಾಗದಲ್ಲಿರುವ ಕೆಳಕಕ್ಷೆಯಲ್ಲಿ ಕೂರಿಸಲಿದೆ. ನಂತರ ಎರಡು ಬಾರಿ ಮರು ಚಾಲನೆಗೆ ಒಳಗಾಗುತ್ತದೆ. ಕಕ್ಷೆಯ ಚಲನೆಯ ವೇಗಕ್ಕೆ ಹೊಂದಿಕೊಂಡು ಚಲನೆ ಆರಂಭಿಸುತ್ತದೆ ಎಂದು ಇಸ್ರೋ ಹೇಳಿದೆ.
ಕಪ್ಪು ಕುಳಿಗಳು, ನ್ಯೂಟ್ರಾನ್ ಹಾಗೂ ನಕ್ಷತ್ರಗಳ ಅಧ್ಯಯನ ಮಾಡಲು ವಿಶೇಷ ಖಗೋಳ ವೀಕ್ಷಣಾಲಯವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಎರಡನೇ ದೇಶ ಭಾರತವಾಗಿದೆ.