ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ 2028 ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವು ಇತಿಹಾಸ ಸೃಷ್ಟಿಸಲಿದೆ. ಜುಲೈ 14, 2028 ರಿಂದ ಜುಲೈ 30 ರವರೆಗೆ ನಡೆಯಲಿರುವ ಈ ಮಹಾ ಕ್ರೀಡಾಕೂಟವು ಒಟ್ಟು 36 ವಿವಿಧ ಕ್ರೀಡೆಗಳೊಂದಿಗೆ ಹಿಂದೆಂದಿಗಿಂತಲೂ ಅತಿದೊಡ್ಡ ಸ್ಪರ್ಧೆಯಾಗಿ ರೂಪುಗೊಳ್ಳಲಿದೆ. ಇದಕ್ಕಾಗಿ ಲಾಸ್ ಏಂಜಲೀಸ್ ಮತ್ತು ಓಕ್ಲಹೋಮ ನಗರಗಳಲ್ಲಿ ಬರೋಬ್ಬರಿ 49 ಸ್ಥಳಗಳು ಮತ್ತು 18 ವಲಯಗಳನ್ನು ಗುರುತಿಸಲಾಗಿದೆ.
100 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್:
ಕಳೆದ 1900 ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೇವಲ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಏಕೈಕ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಗೆದ್ದು ಗ್ರೇಟ್ ಬ್ರಿಟನ್ ಚಿನ್ನ ಗೆದ್ದಿತ್ತು. ಈಗ, ಸರಿಯಾಗಿ ಒಂದು ಶತಮಾನದ ನಂತರ, ಕ್ರಿಕೆಟ್ ಮತ್ತೆ ಒಲಿಂಪಿಕ್ ವೇದಿಕೆಗೆ ಮರಳುತ್ತಿದೆ.
ಕ್ರಿಕೆಟ್ ವೇಳಾಪಟ್ಟಿ ವಿವರಗಳು:
ಆರಂಭ: ಒಲಿಂಪಿಕ್ಸ್‌ನ ಅಧಿಕೃತ ದಿನಾಂಕಕ್ಕೆ ಮುನ್ನವೇ, ಮೊದಲ ಕ್ರಿಕೆಟ್ ಪಂದ್ಯವು ಜುಲೈ 12, 2028 ರಂದು ಆರಂಭವಾಗಲಿದೆ.
ಅಂತಿಮ ಪಂದ್ಯ: ಫೈನಲ್ ಕದನ ಜುಲೈ 29 ರಂದು ನಡೆಯಲಿದೆ.
ಸ್ಥಳ: ಲಾಸ್ ಏಂಜಲೀಸ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಪೊಮೆನಾದ ಫೇರ್‌ಗ್ರೌಂಡ್ಸ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ಪದಕ ಪಂದ್ಯಗಳು: ಜುಲೈ 19 ಮತ್ತು ಜುಲೈ 29, 2028 ರಂದು ನಿಗದಿಯಾಗಿವೆ.
ತಂಡಗಳು: ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ಆರು ತಂಡಗಳು ಸ್ಪರ್ಧಿಸಲಿವೆ. ತಂಡಗಳ ಅಧಿಕೃತ ಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪಂದ್ಯಗಳ ಹಂಚಿಕೆ: ವೇಳಾಪಟ್ಟಿಯ ಪ್ರಕಾರ ಹೆಚ್ಚಿನ ದಿನಗಳಲ್ಲಿ ದಿನಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಜುಲೈ 14 ಮತ್ತು 21 ರಂದು ಪಂದ್ಯಗಳಿಗೆ ವಿರಾಮ ಇರುತ್ತದೆ.
ಸಂಕ್ಷಿಪ್ತ ವೇಳಾಪಟ್ಟಿ (ಕ್ರಿಕೆಟ್):
ಮೊದಲ ಹಂತದ ಪಂದ್ಯಗಳು: ಜುಲೈ 12 ರಿಂದ 18 ರವರೆಗೆ.
ಪದಕ ಪಂದ್ಯಗಳು (ಜುಲೈ 19 – ಯುಎಸ್‌ನಲ್ಲಿ): ಜುಲೈ 20 ರಂದು.
ಎರಡನೇ ಹಂತದ ಪಂದ್ಯಗಳು: ಜುಲೈ 22 ರಿಂದ 28 ರವರೆಗೆ.
ಫೈನಲ್: ಜುಲೈ 29 ರಂದು.
ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅಧಿಕೃತವಾಗಿ ಜುಲೈ 14 ರಂದು ಆರಂಭವಾದರೂ, ಕ್ರಿಕೆಟ್ ಸೇರಿದಂತೆ ಕೆಲವು ಪ್ರಮುಖ ಸ್ಪರ್ಧೆಗಳು ಕೆಲವು ದಿನ ಮುಂಚಿತವಾಗಿ ಶುರುವಾಗಲಿವೆ. ಪ್ರಮುಖ ಸ್ಪರ್ಧೆಯಲ್ಲಿ ಒಂದೇ ದಿನ ಮೂರು ರೇಸ್‌ಗಳು ನಡೆಯಲಿರುವುದು ಸಹ ಇದೇ ಮೊದಲು.
ಒಟ್ಟಿನಲ್ಲಿ, ಬೃಹತ್ ಪ್ರಮಾಣದಲ್ಲಿ ನಡೆಯಲಿರುವ LA 2028 ಒಲಿಂಪಿಕ್ಸ್, ಶತಮಾನದ ಬಳಿಕ ಕ್ರಿಕೆಟ್ ಅನ್ನು ಮತ್ತೆ ಪರಿಚಯಿಸುವ ಮೂಲಕ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.

