September 30, 2026
Wednesday, September 30, 2026
spot_img

ಹಾರ್ಮುಜ್ ಜಲಸಂಧಿ ಹಿಡಿತಕ್ಕೆ ಮುಂದಾದ ಟ್ರಂಪ್ ಗೆ ಶಾಕ್: ತಮ್ಮ ಬೆಂಬಲ ಇಲ್ಲ ಎಂದ ನೆರೆ ರಾಷ್ಟ್ರಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ ನ ಹಿಡಿತದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ವಶಕ್ಕೆ ಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ನಿರಾಸೆ ಉಂಟಾಗಿದ್ದು, ವಿವಿಧ ರಾಷ್ಟ್ರಗಳು ಯುದ್ಧನೌಕೆಗಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದೆ.

ಹಾರ್ಮುಜ್ ಜಲಸಂಧಿಯ ಸುರಕ್ಷತೆ ದೃಷ್ಟಿಯಿಂದ ಜಪಾನ್, ಆಸ್ಟ್ರೇಲಿಯಾ ಮತ್ತು ಯುಕೆ ದೇಶಗಳು ಟ್ರಂಪ್ ಸೂಚನೆಯನ್ನು ಧಿಕ್ಕರಿಸಿದ್ದು, ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ ಎಂದು ಖಡಕ್ ಆಗಿ ತಿಳಿಸಿವೆ.

ಈ ಕುರಿತು ಮಾತನಾಡಿದ ಜಪಾನ್ ಪ್ರಧಾನಿ ಸನೇ ತಕೈಚಿ, ಸದ್ಯದ ಪರಿಸ್ಥಿತಿಗೆ ಯಾವು ಯಾವುದೇ ರೀತಿಯ ನೌಕಾ ಹಡಗುಗಳನ್ನು ನೀಡುವ ಯೋಚನೆಯಲ್ಲಿ ಇಲ್ಲ ಎಂದು ತಿಳಿದ್ದಾರೆ.

ಅದೇ ರೀತಿ, ಆಸ್ಟ್ರೇಲಿಯಾ ಹಾಗು ಯುಕೆ ಕೂಡ ಯಾವುದೇ ಹಡಗುಗಳನ್ನು ನಿಯೋಜಿಸುವುದಿಲ್ಲ ಎಂದು ಅಮೆರಿಕಕ್ಕೆ ಖಡಕ್ ಆಗಿ ಉತ್ತರಿಸಿದೆ.

ಕಳೆದ ವಾರಾಂತ್ಯದಲ್ಲಿ ಟ್ರಂಪ್, ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಬ್ರಿಟನ್ ಸೇರಿದಂತೆ ಹರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಿಸುವ ದೇಶಗಳಿಗೆ ತಮ್ಮ ತೈಲ ಹಡಗುಗಳಿಗೆ ಬೆಂಗಾವಲು ಹಡಗುಗಳನ್ನು ಕಳುಹಿಸುವಂತೆ ಕರೆ ನೀಡಿದ್ದರು.

Must Read