ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪ್ರಭೇದದ ಕಲರ್‌ಫುಲ್‌ ಕಡಜ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶಿಷ್ಟ ಅರಣ್ಯವನ್ನು ಹೊಂದಿರುವ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ವನ್ಯಧಾಮದಲ್ಲಿ ಹೊಸ ಪ್ರಭೇದದ ವರ್ಣರಂಜಿತ ಕಡಜವೊಂದು ಪತ್ತೆಯಾಗಿದೆ.

ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎನ್ವಿರಾನ್‌ಮೆಂಟ್ ಸಂಶೋಧಕರಾದ ರಂಜಿತ್ ಎ ಪಿ ಮತ್ತು ಪ್ರಿಯದರ್ಶನನ್ ಧರ್ಮ ರಾಜನ್ ಅವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಪ್ರಭೇದದ ಕಡಜವನ್ನು ಪತ್ತೆ ಮಾಡಿದ್ದಾರೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ದೇಶದ 4 ವಿವಿಧ ಭಾಗಗಳಲ್ಲಿ ಈ ಹೊಸ ಪ್ರಭೇದದ ಕಡಜವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!