ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಷಾರಾಮಿ ಹೋಟೆಲ್‌ನಲ್ಲಿ ಒಂದು ರಾತ್ರಿ ಉಳಿಯುತ್ತೀರಿ ಅಂತಾದರೆ ನೀವು ಎಷ್ಟು ಖರ್ಚು ಮಾಡುತ್ತೀರಿ? ಪ್ರವಾಸ, ಕೆಲಸದ ಮೇಲಿನ ನಿಮ್ಮ ಬಜೆಟ್ ಅನ್ನು ಅವಲಂಬಿಸಿ ಸಾಮಾನ್ಯವಾಗಿ 10 ಸಾವಿರದಿಂದ 20 ಸಾವಿರ ರೂ. ಇರಬಹುದು. ಆದರೆ ವಿಶ್ವದ ಅತ್ಯಂತ ದುಬಾರಿ ಹೋಟೆಲ್ ಸೂಟ್‌ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಅಲ್ಲಿ ನೀವು ಪಾಯಿಸಬೇಕಾದ ಹಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಸೋದರಸಂಬಂಧಿ ಅಲನ್ನಾ ಪಾಂಡೆ ಇತ್ತೀಚೆಗೆ ದುಬೈನಲ್ಲಿನ ಅತ್ಯಂತ ದುಬಾರಿ ಸೂಟ್‌ನ ವೀಡಿಯೊವನ್ನು ತಮ್ಮ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ದುಬೈನ ಅಟ್ಲಾಂಟಿಸ್ ದಿ ರಾಯಲ್ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು 83 ಲಕ್ಷ ರೂ ಪಾವತಿಸಬೇಕಂತೆ. ದಿ ರಾಯಲ್ ಮ್ಯಾನ್ಷನ್ ಎಂದು ಕರೆಯಲ್ಪಡುವ ಈ ಅಲ್ಟ್ರಾ-ಆಧುನಿಕ ನಾಲ್ಕು ಬೆಡ್‌ರೂಮ್ ಪೆಂಟ್‌ಹೌಸ್ ಅದ್ಭುತ ಸೌಕರ್ಯಗಳನ್ನು ಹೊಂದಿದೆ.
ಈ ಐಷಾರಾಮಿ ಸೂಟ್ ಖಾಸಗಿ ಫೋಯರ್, 12-ಆಸನದ ಊಟದ ಕೋಣೆ, ಕಾನ್ಫರೆನ್ಸ್ ಕೊಠಡಿ, ಮನರಂಜನಾ ಕೊಠಡಿ, ಒಳಾಂಗಣ ಮತ್ತು ಹೊರಾಂಗಣ ಅಡುಗೆಮನೆ, ಚಿತ್ರಮಂದಿರ, ಕಚೇರಿ, ಗ್ರಂಥಾಲಯ ಮತ್ತು ಖಾಸಗಿ ಬಾರ್ ಅನ್ನು ಒಳಗೊಂಡಿದೆ. ಈ ವರ್ಷದ ಜನವರಿಯಲ್ಲಿ ಅಟ್ಲಾಂಟಿಸ್ ದಿ ರಾಯಲ್ ವಿಶ್ವ ದರ್ಜೆಯ ಸೂಟ್ ಅನ್ನು ತೆರೆಯಲಾಯಿತು. ಈ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ನಟರು ಭಾಗವಹಿಸಿದ್ದರು.