ವೋಲ್ವೋ ಬಸ್ ನ ಬಾಗಿಲು ತೆರೆದು ಪಾನ್ ಉಗುಳಲು ಹೋಗಿ ಪ್ರಾಣ ಕಳೆದುಕೊಂಡ ಪ್ರಯಾಣಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಸುಲ್ತಾನ್‌ಪುರ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದಂತೆ ವೋಲ್ವೋ ಬಸ್ ನಲ್ಲಿದ್ದ 45 ವರ್ಷದ ಪ್ರಯಾಣಿಕ ಬಾಗಿಲು ತೆರೆದು ಪಾನ್ ಉಗುಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ ಘಟನೆ ನಡೆದಿದೆ.

ಈ ಘಟನೆಯು ಎಕ್ಸ್‌ಪ್ರೆಸ್‌ವೇಯ 93-ಕಿಮೀ ಮೈಲಿಗಲ್ಲಿನಲ್ಲಿ ಇಂದು ಬೆಳಗ್ಗೆ 10.30 ರ ಸುಮಾರಿಗೆ ಬಸ್ ಅಜಂಗಢದಿಂದ ಲಖನೌಗೆ ತೆರಳುತ್ತಿದ್ದಾಗ ಸಂಭವಿಸಿದೆ.

ಬಸ್ ಬಾಲ್ದಿರೈ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಿ ಗ್ರಾಮದ ಬಳಿ ತಲುಪುತ್ತಿದ್ದಂತೆ, ಪ್ರಯಾಣಿಕರೊಬ್ಬರು ಪಾನ್ ಉಗುಳಲು ಚಲಿಸುತ್ತಿದ್ದ ಬಸ್‌ನ ಬಾಗಿಲು ತೆರೆದಿದ್ದಾರೆ. ಆದರೆ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಚಿನ್ಹಾಟ್ ಪ್ರದೇಶದ ನಿವಾಸಿ ರಾಮ್ ಜಿವಾನ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಸಾವಿತ್ರಿ ಕೂಡ ಅವರೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಕುಮಾರ್ ಹೇಳಿದ್ದಾರೆ.

ಬಸ್ ಅನ್ನು ತಕ್ಷಣವೇ ನಿಲ್ಲಿಸಲಾಯಿತು ಮತ್ತು ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ(ಯುಪಿಇಐಡಿಎ) ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

UPEIDA ಸಿಬ್ಬಂದಿ ವ್ಯಕ್ತಿಯನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ವೈದ್ಯರು ಅವರು ಬರುವಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿರುವುದಾಗಿ ಬಲ್ದಿರೈ ಸ್ಟೇಷನ್ ಹೌಸ್ ಆಫೀಸರ್ (SHO) ಧೀರಜ್ ಕುಮಾರ್ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here