ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಏಳನೇ ತರಗತಿ ಬಾಲಕನ ಮೇಲೆ ಪ್ಯೂನ್ ಅತ್ಯಾಚಾರ ಎಸಗಿದ್ದಾನೆ.
ಸತ್ನಾ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಬಾಲಕ ಅನಾರೋಗ್ಯದ ಕಾರಣ ಹಾಸ್ಟೆಲ್‌ನಲ್ಲಿಯೇ ಉಳಿದಿದ್ದ. ಈ ವೇಳೆ ಪ್ಯೂನ್ ಅತ್ಯಾಚಾರ ಎಸಗಿ ಬೆದರಿಕೆ ಹಾಕಿ ಹೋಗಿದ್ದಾನೆ.
ಆರೋಪಿ ರವೀಂದ್ರ ಸೇನ್ ವಿಷಯವನ್ನು ಎಲ್ಲೂ ಬಾಯ್ಬಿಡುವಂತಿಲ್ಲ ಎಂದು ಹೇಳಿದ್ದು, ಹೆದರಿದ ಬಾಲಕ ತನ್ನ ಪೋಷಕರ ಬಳಿ ಘಟನೆ ವಿವರಿಸಿ ಶಾಲೆಗೆ ಹೋಗುವುದಿಲ್ಲ ಎಂದಿದ್ದಾನೆ.
ತದನಂತರ ಪೋಷಕರು ಶಾಲೆಯ ಬಳಿ ಬಂದು ಪ್ರಾಂಶುಪಾಲರ ಭೇಟಿಗೆ ಕಾದು ನಿಂತಿದ್ದಾರೆ. ಆದರೆ ಪ್ರಾಂಶುಪಾಲರು ಭೇಟಿಗೆ ಒಪ್ಪದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಷಕರು ರವೀಂದ್ರ ಸೇನ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.