ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸಹಪ್ರಯಾಣಿಕನಿಗೆ ಬೆಂಕಿ ಹಚ್ಚಿದ್ದಾನೆ.
ಕೇರಳ ಎಕ್ಸ್‌ಪ್ರೆಸ್ ರೈಲಿಗೆ ಹತ್ತುವ ವಿಚಾರವಾಗಿ ಜಗಳ ನಡೆದಿದ್ದು, ವ್ಯಕ್ತಿ ಸಹಪ್ರಯಾಣಿಕನಿಗೆ ಬೆಂಕಿ ಹಚ್ಚಿ ಕೊಂಡಿದ್ದಾನೆ. ಕಾಲ್ತುಳಿತ ಹಾಗೂ ಸುಟ್ಟ ಗಾಯಗಳಿಂದ ಮೂರು ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ,
ಮಹಿಳೆ ಹಾಗೂ ಮಗು ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದಾರೆ. ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದ ವ್ಯಕ್ತಿ ರೈಲಿನ ಚೈನ್ ಎಳೆದು ಪರಾರಿಯಾಗಿದ್ದಾನೆ. ರೈಲ್ವೆ ಹಳಿ ಬಳಿ ಮೂವರ ಶವ ಪತ್ತೆಯಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.