ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಸಭಾಧ್ಯಕ್ಷರ ಪೀಠದ ಬಳಿ ಕಾಂಗ್ರೆಸ್‌ನ ಕೆಲವು ನಾಯಕರು ಫೋಟೋ ಶೂಟ್ ನಡೆಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವರ್ತನೆ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿದೆ. ಈ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಇದು ಅಧಿವೇಶನ ಆರಂಭವಾಗುವ ಮುನ್ನ ಸದನದ ಒಳಗಡೆ ತೆಗೆದ ಫೊಟೋ ಆಗಿದೆ. ಸದನ ನಡೆಯುವಾಗ ತೆಗೆದ ಫೋಟೋ ಅಲ್ಲ. ಅಧಿವೇಶನ ಆರಂಭವಾಗುವ ಮುನ್ನ ಸದನದಲ್ಲಿ ಕೆಲಸ ನಡೆಯುತ್ತಿರುವಾಗ ರಾತ್ರಿ 10 ಗಂಟೆಗೆ ತಪಾಸಣೆಗೆ ಹೋಗಿದ್ದೆ. ಆಗ ಅಲ್ಲಿಗೆ ಆಗಮಿಸಿದ್ದವರು ನನ್ನೊಂದಿಗೆ ಫೋಟೋ ತೆಗೆಸಿಕೊಂಡಿದ್ದು ಅಷ್ಟೆ ಎಂದಿದ್ದಾರೆ.