SPECIAL| ಛಾಯಾಗ್ರಾಹಕರೊಬ್ಬರ ಜೀವನಾಧಾರವಾದ 1860ರ ದಶಕದ ಕ್ಯಾಮರಾ!

ತ್ರಿವೇಣಿ ಗಂಗಾಧರಪ್ಪ:‌ 

ಈಗ ಡಿಜಿಟಲ್ ಯುಗ..ಒಂದು ಮೊಬೈಲ್‌ ಕೈಲಿದ್ದರೆ ಸಾಕು ಜಾದುನೇ ಮಾಡುತ್ತೆ. ಇಂತಹ ಕಾಲದಲ್ಲೂ ಕೂಡ ಒಬ್ಬ ವ್ಯಕ್ತಿ ಹಳೆ ಕಾಲದ ಕ್ಯಾಮೆರಾ ಇಟ್ಟುಕೊಂಡೆ ತನ್ನ ಜೀವನದ ಬಂಡಿಯನ್ನು ನಡೆಸುತ್ತಿದ್ದಾನೆ. ಈ ಸ್ಥಳಕ್ಕೆ ಭೇಟಿ ಕೊಡುವವರು ಕೂಡ ಖುಷಿ ಖುಷಿಯಿಂದಲೇ ಈ ಬ್ಲಾಕ್‌ ಅಂಡ್‌ ವೈಟ್‌ ಫೋಟೋಗೆ ಪೋಸ್‌ ಕೊಟ್ಟು ಬರುತ್ತಾರೆ. ಈ ಕ್ಯಾಮೆರಾ ಕಾಣಸಿಗೋದು ಜೈಪುರದಲ್ಲಿ. ಅನೇಕ ಪ್ರವಾಸಿಗರು ಹವಾಮಹಲ್‌ನ ಹೊರಗೆ ಈ ಕ್ಯಾಮೆರಾದಲ್ಲಿ ಚಿತ್ರಗಳನ್ನು ತೆಗೆಸಿಕೊಳ್ಳುತ್ತಾರೆ. ತಮ್ಮ ಚಿತ್ರಗಳನ್ನು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ನೋಡಿ ಸಂತೋಷ ಪಡುತ್ತಾರೆ.

ಛಾಯಾಗ್ರಾಹಕ ಟಿಕಮ್ ಚಂದ್ ಜೈಪುರದ ಹವಾ ಮಹಲ್‌ನ ಹೊರಗೆ 1860ರ ದಶಕದ ವಿಂಟೇಜ್ ಕ್ಯಾಮೆರಾದಿಂದ ಪ್ರವಾಸಿಗರ ಫೋಟೋಗಳನ್ನು ಸೆರೆ ಹಿಡಿಯುತ್ತಾರೆ. ಚಂದ್‌ ಹೇಳುವಂತೆ ಈ ಕ್ಯಾಮೆರಾವನ್ನು ಜೈಪುರದ ಮಹಾರಾಜರು ತಮ್ಮ ಪೂರ್ವಜ ಪಹಾರಿ ಲಾಲ್‌ಗೆ ಉಡುಗೊರೆಯಾಗಿ ನೀಡಿದ್ದರೆಂದು ಅಂದಿನಿಂದ ಪರಂಪರೆಯಾಗಿ ಇದನ್ನು ಕಾಪಾಡಿಕೊಂಡು ಬಂದಿರುವುದಾಗಿ ಹೇಳಿದ್ದಾರೆ. ಪಹಾರಿ ಲಾಲ್ ರಾಜು ಕೂಡ ಛಾಯಾಗ್ರಾಹಕರಾಗಿದ್ದು, ಅವರಿಂದಲೇ ಈ ಕ್ಯಾಮರಾ ತಮಗೆ ಬಂತು ಎನ್ನುತ್ತಾರೆ. ಈ ಕ್ಯಾಮೆರಾವೇ ತಮ್ಮ ಕುಟುಂಬದ ಆಧಾರವಾಗಿದ್ದು, ಈ ಮಹಲ್‌ಗೆ ಹೋದವರು ಯಾರೂ ಹಾಗೇ ಹೋಗುವುದಿಲ್ಲ, ಹಳೆ ಕಾಲದ ಕ್ಯಾಮೆರಾ ಎಂಬ ಖುಷಿಯಿಂದ ಫೋಟೋ ತೆಗಿಸಿಕೊಂಡೇ ಹೋಗುತ್ತಾರೆ ಎಂಬ ಮಾತನ್ನು ಹೇಳಿದ್ದಾರೆ. ಈ ಕ್ಯಾಮೆರಾವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತೋರಿಸುವ ವೀಡಿಯೊವನ್ನು ಮಾಡಿದ್ದು, Instagram ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ಈ ಕ್ಯಾಮೆರಾ ಆಗೊಮ್ಮೆ ಈಗೊಮ್ಮೆ ಒಡೆದು ಹೋಗುತ್ತಿದೆ. ಈ ಕ್ಯಾಮೆರಾದ ಪ್ರತಿಯೊಂದು ನಟ್ ಮತ್ತು ಬೋಲ್ಟ್ ಬಗ್ಗೆ ಟೀಕಮ್ ಚಂದ್‌ಜಿಗೆ ಮಾತ್ರ ಚೆನ್ನಾಗಿ ತಿಳಿದಿದೆ. ಡಾರ್ಕ್ ರೂಮ್, ಫಿಕ್ಸರ್, ಡೆವಲಪರ್ ಮತ್ತು ಫಿಲ್ಮ್ ಬಾಕ್ಸ್ ಎಲ್ಲಾ ಸೇರಿ ಈ ಕ್ಯಾಮೆರಾ 20 ಕೆಜಿ ತೂಕವಿದೆ ಎಂದು ಮರೂಫ್ ಬರೆದುಕೊಂಡಿದ್ದಾರೆ.

ವಿಡಿಯೋ ಈಗ ವೈರಲ್ ಆಗುತ್ತಿದ್ದು, ‘ಫೋಟೋಗಳ ಗುಣಮಟ್ಟ ಕೂಡ ಅದ್ಭುತವಾಗಿದೆ’ ಎಂದು ಹೇಳಿದ್ದಾರೆ ಜನ. ‘ಎರಡು ವಾರಗಳ ಹಿಂದೆ ನಾವು ಅಲ್ಲಿಗೆ ಹೋಗಿ ಚಿತ್ರಗಳನ್ನು ತೆಗೆದುಕೊಂಡಿದ್ದೇವೆ. ಟಿಕಮ್ ಚಂದ್ ನಮಗೆ ಕ್ಯಾಮೆರಾ ವರ್ಕ್ ಅನ್ನು ಚೆನ್ನಾಗಿ ವಿವರಿಸಿದರು’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಜೈಪುರಕ್ಕೆ ಹೋದವರು ಹವಾಮಹಲ್‌ಗೆ ಭೇಟಿ ನೀಡಲು ಮರೆಯುವುದಿಲ್ಲ. ನೀವೂ ಹೋದರೆ, ಟಿಕಮ್ ಚಂದ್ ಕ್ಯಾಮೆರಾದಲ್ಲಿ ಚಿತ್ರಗಳನ್ನು ತೆಗೆದುಕೊಳ್ಳವುದನ್ನು ಮರೆಯಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!