ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾರಿವಾಳ ರೇಸ್ ಎಂಬುದು ಹಲವರಿಗೆ ದೊಡ್ಡ ಕ್ರೇಜ್. ಇಂತಹ ರೇಸ್‌ನಲ್ಲಿ ಪಾಲ್ಗೊಂಡಿದ್ದ ಮಂಡ್ಯದ ಪಾರಿವಾಳವೊಂದು ಅತಿ ಚಿಕ್ಕ ವಯಸ್ಸಿನಲ್ಲೇ ದಾಖಲೆ ಬರೆದಿದೆ.
ದೆಹಲಿಯಿಂದ ಮಂಡ್ಯಕ್ಕೆ1,790 ಕಿ.ಮೀ ಪ್ರಯಾಣ ಮಾಡಿದ ಒಂದು ವರ್ಷದ ಪಾರಿವಾಳವೊಂದು ಮಾಲೀಕನ ಬಳಿ ವಾಪಸ್ಸಾಗಿ ದಾಖಲೆ ನಿರ್ಮಿಸಿದೆ.
ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ ಅವರು ದೆಹಲಿಯಲ್ಲಿ ಪಾರಿವಾಳಗಳ ರೇಸ್‌ನ್ನು ಆಯೋಜಿಸಿದ್ದರು. ಇದರಲ್ಲಿ ಮಂಡ್ಯದ ವಿ.ಸಿ ಫಾರಂನ ಶ್ರೀಧರ್ ಅವರಿಗೆ ಸೇರಿದ ಅಭಿಮನ್ಯು ಹೆಸರಿನ ಪಾರಿವಾಳವೊಂದು ಸತತ 52 ದಿನಗಳ ಹಾರಾಟ ನಡೆಸಿದ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ ಬಂದಿದೆ.
ಈ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡಿನ ಮೂಲದ ಒಟ್ಟು 22 ಪಾರಿವಾಳ ಭಾಗವಹಿಸಿದ್ದವು. ಪಾರಿವಾಳಗಳಿಗೆ ರೇಸ್‌ಗೂ ಮುನ್ನ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏ.5ರಂದು ಎಲ್ಲಾ ಪಾರಿವಾಳಗಳನ್ನು ಹಾರಿಬಿಡಲಾಗಿತ್ತು. ಅಂದಿನಿಂದ ಒಟ್ಟು 1790 ಕಿ.ಮೀ ಹಾರಾಟ ನಡೆಸಿ ಮೇ.28ರಂದು ಅಭಿಮನ್ಯು ಮಾಲೀಕನ ಬಳಿಗೆ ಬಂದಿದೆ.