ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿಗೆ, ಸಣ್ಣ ವಿಮಾನವೊಂದು ಡಿಕ್ಕಿ ಹೊಡೆದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಯುಸ್‌ನ ಮಿನ್ನಿಯಾಪೋಲಿಸ್‌ನಲ್ಲಿ ನಡೆದ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ (28 ನವೆಂಬರ್ 2023), ಯುಎಸ್ ನಗರದ ಮಿನ್ನಿಯಾಪೋಲಿಸ್‌ನ ಹೆದ್ದಾರಿಯಲ್ಲಿ ವಿಮಾನ ಪತನವಾಗಿ, ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕ ಹಾಗೂ ಪೈಲಟ್ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಕುರಿತು ಅಮೆರಿಕದ ಫೆಡರಲ್ ಏವಿಯೇಷನ್ ಅಥಾರಿಟಿ ತನಿಖೆ ಆರಂಭಿಸಿದ್ದು, ಅಪಘಾತ ಸಂಭವಿಸಿದ ರಸ್ತೆಯನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.
Small plane crash in Brooklyn Park at W Broadway and County 81. Press conference with more info in a few minutes. @FOX9 pic.twitter.com/zdPnCI09VN
— Melissa Martz (@melissakmartz) November 28, 2023