ಹೊಸದಿಗಂತ ಡಿಜಿಟಲ್ ಡೆಸ್ಕ್:
ತುರ್ತು ಅಗ್ನಿ ಅವಘಡ ಸಂದರ್ಭದಲ್ಲಿ ಸುಮಾರು 90 ಮೀಟರ್ ಎತ್ತರದವರೆಗೂ ತಲುಪಿ ಬೆಂಕಿ ನಂದಿಸುವ ಹಾಗೂ ಅಪಾಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಿಸಲು ‘ಏರಿಯಲ್ ಲ್ಯಾಡರ್ ಪ್ಲ್ಯಾಟ್ಫಾರ್ಮ್’ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ನಾಳೆ(ಗುರುವಾರ) ಸೇರ್ಪಡೆಯಾಗಲಿದ್ದು, ಸಿಎಂ ಹಸ್ತಾಂತರ ಮಾಡಲಿದ್ದಾರೆ.
ಈ ಸಂಬಂಧ ವಿಧಾನಸೌಧದ ಗ್ರಾಂಡ್ ಸ್ಟೆಪ್ ಮುಂಭಾಗ ನಾಳೆ ಬೆಳಗ್ಗೆ 10ಕ್ಕೆ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು,
ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ.
90 ಮೀಟರ್ ಎತ್ತರಕ್ಕೆ ನಿಲುಕಲು ಸಾಧ್ಯವಾಗುವ ಏಣಿಯನ್ನು ರಾಜ್ಯ ಸರ್ಕಾರ ಫಿನ್ಲ್ಯಾಂಡ್ ದೇಶದಿಂದ 30 ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಂಡಿದೆ.