ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತ್ರಿಶೂಲ್‌ನಲ್ಲಿ ನಡೆದಿದೆ.
ಆರೋಪಿಯನ್ನು ವಿಷ್ಣು ಎಂದು ಗುರುತಿಸಲಾಗಿದ್ದು, ಆಸ್ತಿ ವಿಚಾರವಾಗಿ ತಂದೆ-ಮಗನ ನಡುವೆ ವಾಗ್ವಾದ ನಡೆಯುತ್ತಲೇ ಇತ್ತು ಎಂದು ತಿಳಿದು ಬಂದಿದೆ. ತಂದೆಯ ಕೊಲೆ ಮಾಡಿದ ಬಳಿಕ ಮನೆಯ ಬಾಗಿಲು ಹಾಕಿಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಆರೋಪಿಯು ಮುತ್ರಾತಿಕ್ಕರ ನಿವಾಸಿಯಾಗಿದ್ದು, ಆತನ ತಂದೆ ಶಿವನ್ ಆಟೋ ಚಾಲಕ ಎಂದು ತಿಳಿದು ಬಂದಿದೆ.
ಆಸ್ತಿ ಪತ್ರಗಳ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿದೆ. ಮಾತು ಉಲ್ಬಣವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಶನಿವಾರ ಆಸ್ತಿ ಪತ್ರಗಳ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿದೆ. ಮಾತು ಉಲ್ಬಣವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ವಿಷ್ಣು ತಾನು ಕಾಗದಗಳನ್ನು ಬಾವಿಗೆ ಎಸೆದಿದ್ದೇನೆ ಎಂದು ಹೇಳಿದ್ದರಿಂದ ಈ ಗಲಾಟೆ ಶುರುವಾಗಿತ್ತು. ಈ ಮಾತಿನ ಚಕಮಕಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು ಮತ್ತು ವಿಷ್ಣು ತನ್ನ ತಂದೆಯ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ವರದಿಯ ಪ್ರಕಾರ, ಆರೋಪಿ ಮೊದಲು ಅಡುಗೆಮನೆಯಲ್ಲಿ ತಂದೆ ಮೇಲೆ ಹಲ್ಲೆ ನಡೆಸಿ, ನಂತರ ಮನೆಯ ಹೊರಗೆ ಓಡಿಸಿ ಮತ್ತೆ ಹಲ್ಲೆ ನಡೆಸಿದ್ದಾನೆ. ತಂದೆಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಕೋಮಾದಲ್ಲಿದ್ದಾರೆ. ಆರೋಪಿಯ ತಾಯಿ ಹಾಗೂ ಇತರ ಸಂಬಂಧಿಕರು ಅವರನ್ನು ಮಗನಿಂದ ರಕ್ಷಿಸಿ ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದರು, ಆರೋಪಿ ಮಗ ಮನೆಯ ಮೊದಲ ಮಹಡಿಯಲ್ಲಿ ಬೀಗ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸುವುದಾಗಿ ಬೆದರಿಕೆ ಹಾಕಿದ್ದ. 5.30 ರ ಸುಮಾರಿಗೆ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.