ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸಿನಿಮಾದ ಮ್ಯೂಸಿಕ್ ಡೈರೆಕ್ಟರ್, ನಿರ್ಮಾಪಕ ಹಾಗೂ ನಟ ಜಿವಿ ಪ್ರಕಾಶ್ ಅವರು ತಮ್ಮ 11 ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹೇಳುತ್ತಿದ್ದಾರೆ.
ಪತ್ನಿ ಖ್ಯಾತ ಸಿಂಗರ್ ಸೈಂಧವಿ ಪ್ರಕಾಶ್ಗೆ ವಿಚ್ಛೇದನ ನೀಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಜಿವಿ ಪ್ರಕಾಶ್ ಹಾಗೂ ಸೈಂಧವಿ ಶಾಲಾ ದಿನಗಳಿಂದಲೇ ಪ್ರೀತಿ ಮಾಡಿದ್ದರು. ದೀರ್ಘವಾದ ಪ್ರೇಮಾಂಕುರದಿಂದ ಇಬ್ಬರು ಮನೆಯಲ್ಲಿ ಪೋಷಕರನ್ನು ಒಪ್ಪಿಸಿ 2013ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿಗೆ ಅವರಿಗೆ ದಾಂಪತ್ಯದಲ್ಲಿ 11 ವರ್ಷಗಳನ್ನು ಕಳೆದಿದ್ದರು. ಆದರೆ ಕೆಲ ಕಾರಣಗಳಿಂದ ತಮ್ಮ ಸುಂದರ ಸಂಸಾರಕ್ಕೆ ಅಂತ್ಯ ಹೇಳುತ್ತಿದ್ದಾರೆ.
ಕೆಲ ವರ್ಷಗಳಿಂದ ಹೊಂದಾಣಿಕೆಯ ಸಮಸ್ಯೆ ಆಗುತ್ತಿರುವ ಕಾರಣ ವಿಚ್ಛೇದನ ಪಡೆಯುತ್ತಿದ್ದಾರೆ.