ಹೊಸದಿಗಂತ ವರದಿ ಬಾಗಲಕೋಟೆ:
ಎಲ್ಲ ಸಮಾಜದಲ್ಲಿ ಕೆಟ್ಟವ್ರು ಇರುತ್ತಾರೆ. ಒಳ್ಳೆಯವರು ಇರುತ್ತಾರೆ .ಆದರೆ ಸಮಾಜದಲ್ಲಿ ನಾವು ಯಾವುದು ಸ್ವೀಕರಿಸಬೇಕು ಎಂಬುದನ್ನು ವಿವೇಚನೆ ನಮ್ಮಲ್ಲಿ ಇರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ಬಾಗಲಕೋಟೆ ತಾಲೂಕ ಘಟಕದಿಂದ ಭಾನುವಾರ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ದಲ್ಲಿ ಮಾತನಾಡಿದರು. ಬಣಜಿಗ ಸಮಾಜದಲ್ಲಿ ಪ್ರತಿಭಾವಂತರು ಇದ್ದಾರೆ. ಅವರು ಹೆಚ್ಚು ಐಎಎಸ್, ಐಪಿಎಸ್ ಓದಬೇಕು. ಸಮಾಜದ ಉನ್ನತಿಗೆ ಶ್ರಮಿಸಬೇಕು. ಈಗಾಗಲೇ ಸಣ್ಣ ಸಮುದಾಯದ ಮುಂದುವರೆದಿವೆ.
ಉದಾಹರಣೆಗೆ ಬ್ರಾಹ್ಮಣ ಸಮಾಜದ ವರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದಿದ್ದಾರೆ.ಸಾಧಕ, ಮುಂದುವರೆದ ಸಮಾಜವನ್ನು ಸಮುದಾಯದವರನ್ನು ಅನುಕರಣೆ ಮಾಡಬೇಕು.ಆಗ ಸಮಾಜದ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ತಿಳಿಸಿದರು.