Thursday, September 25, 2025

SHOCKING | ಮಲಗಿದ್ದ ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ ತಂದೆ!

ಹೊಸದಿಗಂತ ವರದಿ ಯಾದಗಿರಿ :

ಪತ್ನಿ ಶೀಲ ಶಂಕಿಸಿ ಹೆತ್ತ ಮಕ್ಕಳನ್ನೇ‌ಪಾಪಿ ತಂದೆಯೊಬ್ಬ ಬರ್ಬರವಾಗಿ ಹತ್ಯೆಗೈದ ಹೃದಯವಿದ್ರಾವಕ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಗುರುವಾರ ಬೆಳಗಿನ‌ಜಾವ ನಡೆದಿದೆ.

ತಾಯಿ ಬಹಿರ್ದೆಸೆಗೆ ಹೋದಾಗ ಮನೆಯಲ್ಲಿ ಮಲಗಿದ್ದ ಸಾನ್ವಿ (5) ಭರತ (3) ಮತ್ತೊರ್ವ ಮಗನನ್ನು ಕೊಡಲಿಯಿಂದ ಕೊಚ್ಚಿದ್ದಾನೆ. ಸಾನ್ವಿ ಮತ್ತು ಭರತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ,ಮತ್ತೋರ್ವ ಮಗನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಗಂಡನೊಂದಿಗೆ ಹೊಂದಾಣಿಕೆಯಾಗದೆ ಪತ್ನಿ ತವರು ಮನೆ ಸೇರಿದ್ದಳು. ಕಳೆದ ಹದಿನೈದು ದಿನಗಳ ಹಿಂದಷ್ಟೇ ಪತ್ನಿ ಕರೆ ತಂದಿದ್ದ ಪಾಪಿ ಪತಿ. ಬೆಳಗ್ಗೆ ಹೆಂಡತಿ ಬಹಿರ್ದೆಸೆಗೆ ಹೋದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಯಾದಗಿರಿ ಡಿವೈಎಸ್ಪಿ ಸುರೇಶ್ ನಾಯಕ್, ಪಿಎಸ್ಐ ಹಣಮಂತ ಬಂಕಲಗಿ ಭೇಟಿ ನೀಡಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ