March 16, 2026
Monday, March 16, 2026
spot_img

ಊಟ ಮಾಡ್ತಾ ಕೂತಿದ್ದ ವಿದ್ಯಾರ್ಥಿಗೆ ಕಚ್ಚಿದ ಹಾವು, ಸಿನಿಮಾ ಥರ ರಕ್ತ ಹೀರಿದ ಶಿಕ್ಷಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲಾ ಆವರಣದಲ್ಲಿ ಕುಳಿತುಕೊಂಡು ಊಟ ಮಾಡ್ತಿದ್ದ ವಿದ್ಯಾರ್ಥಿಗೆ ನಾಗರ ಹಾವು ಕಚ್ಚಿದ್ದು, ಸಿನಿಮಾ ರೀತಿ ಶಿಕ್ಷಕರೊಬ್ಬರು ವಿಷವನ್ನು ಹೀರಿ ಹೊರಗೆ ಹಾಕಿದ್ದಾರೆ.

ಚಿತ್ರದುರ್ಗದ ಹುಣಸೆಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಮಕ್ಕಳು ಗುಂಪು ಗುಂಪಾಗಿ ಶಾಲಾ ಆವರಣದಲ್ಲಿ ಕುಳಿತು ಊಟ ಮಾಡುವ ವೇಳೆ ನಾಗರಹಾವು ಕಚ್ಚಿದೆ. ವಿದ್ಯಾರ್ಥಿನಿ ನೋವು ತಾಳರಾರದೇ ಕಿರುಚಾಡಿದ್ದಾಳೆ. ತಕ್ಷಣ ಶಿಕ್ಷಕ ರವಿಶಂಕರ್‌ ಓಡಿ ಬಂದು ಕಾಲಿಗೆ ಬಾಯಿ ಹಾಕಿ ರಕ್ತವನ್ನು ಹೀರಿ ಉಗಿದಿದ್ದಾರೆ.

ಹಾವು ಕಚ್ಚಿದ ಜಾಗಕ್ಕೆ ಬಟ್ಟೆಯನ್ನು ಕಟ್ಟಿ ಆಸ್ಪತ್ರೆಗೆ ದಾಖಸಿಲಾಗಿದೆ. ನಂತರ ರವಿಶಂಕರ್‌ ಕೂಡ ಅಸ್ವಸ್ಥರಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ನಡುವೆ ಬೃಹತ್‌ ಗಾತ್ರದ ನಾಗರಹಾವನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಹಿಡಿದು ಹೊಡೆದು ಹಾಕಿದ್ದು, ಶಿಕ್ಷಕ ರವಿಶಂಕರ್ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !