October 11, 2026
Sunday, October 11, 2026
spot_img

IPL | ಇನ್ನೂ ಗೆಲುವಿನ ಖಾತೆ ತೆರೆಯದ ಚೆನ್ನೈ: ಮುಂದಿನ ಮ್ಯಾಚ್ ಗೆ ತಂಡಕ್ಕೆ ಸಿಗಲಿದೆಯೇ ಧೋನಿ ಬಲ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾಕೋ ಮಂಕಾಗಿದ್ದು, ಆಡಿದ ಸತತ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಹೀಗಾಗಿ ಈ ಬಾರಿ ಲೀಗ್ ಹಂತದಲ್ಲೇ ಹೊರಬೀಳಲಿದೆಯಾ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇದರ ನಡುವೆ ಮತ್ತೊಂದು ಕಡೆ ತಂಡದ ಆಧಾರ, ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದ ಬಳಲುತ್ತಿದ್ದು, ಹೀಗಾಗಿ ಮೊದಲ ಎರಡು ವಾರಗಳವರೆಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಫ್ರಾಂಚೈಸಿ ಘೋಷಿಸಿತ್ತು. ಆದರೆ ಇದೀಗ ಮುಂದಿನ ಪಂದ್ಯಕ್ಕೂ ಧೋನಿ ಆಗಮನ ಅನುಮಾನವಾಗಿದೆ.

ಸದ್ಯ ಧೋನಿ ಗಾಯದಿಂದ ಚೇತರಿಕೆ ಕಾಣುತ್ತಿದ್ದು, ಆದರೆ ಸಂಪೂರ್ಣ ಆಡುವಷ್ಟು ಫಿಟ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು ಇನ್ನೂ ಚೆನ್ನೈನಲ್ಲೇ ಉಳಿದಿದ್ದಾರೆ . ಹೀಗಾಗಿ ತಂಡಕ್ಕೆ ಸೇರಲು ಕನಿಷ್ಠ ಇನ್ನೊಂದು ವಾರ ಬೇಕಾಗಬಹುದು. ಇದರಿಂದ ಏಪ್ರಿಲ್ 11 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಧೋನಿ ಕಮ್ ಬ್ಯಾಕ್ ಕಡಿಮೆ ಎನ್ನಲಾಗುತ್ತಿದೆ.

Must Read