ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಂಜಾನಿಯಾದಲ್ಲಿದ್ದರೂ ಭಾರತೀಯ ಸಿನಿಮಾಗಳ ಹಾಡಿಗೆ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಿ ಫೇಮಸ್ ಆಗಿರುವ ಸ್ಟಾರ್ ಕಿಲಿ ಪೌಲ್ (Kili Paul) ಅಯೋಧ್ಯೆಗೆ ಬರಲು ಉತ್ಸುಕರಾಗಿದ್ದಾರೆ.
ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಆಗಮಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿ ‘ರಾಮ್ ಸಿಯಾ ರಾಮ್’ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿಯೂ ರಾಮಘೋಷ ಮೊಳಗಿದ್ದು, ಜಾತಿ, ಧರ್ಮ, ನೆಲದ ಬೇಧವಿಲ್ಲದೆ ಜನ ಶ್ರೀರಾಮನನ್ನು ಆರಾಧಿಸುತ್ತಿದ್ದಾರೆ. ಜನವರಿ 22 ರಂದು ಗಣ್ಯರ ಸಮ್ಮುಖದಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆಯಾಗಲಿದೆ.