ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಮಹಡಿ ಕಟ್ಟಡದಿಂದ ಜಿಗಿದು ಸಾಫ್ಟ್ ವೇರ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದ ಬಹು ಮಹಡಿ ಸೊಸೈಟಿಯ20 ನೇ ಮಹಡಿಯಿಂದ ಜಿಗಿದು ನಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆಬ್ರವರಿ 3 ರಂದು ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ನಮನ್ ಎಂದು ಗುರುತಿಸಲಾಗಿದ್ದು, ಫೆಬ್ರವರಿ 2 ರಂದು ಸೆಕ್ಟರ್ 168 ಸೊಸೈಟಿಗೆ ಮಹಿಳಾ ಸಹಚರರೊಂದಿಗೆ ಆಗಮಿಸಿದ್ದರು ಎಂದು ನೋಯ್ಡಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಶುತೋಷ್ ದ್ವಿವೇದಿ ಮಾಹಿತಿ ನೀಡಿದ್ದಾರೆ.
ಸೆಕ್ಟರ್ 168 ಹೈ-ರೈಸ್ ಸೊಸೈಟಿಯಲ್ಲಿ ಅಪಾರ್ಟ್ಮೆಂಟ್ ಅನ್ನು ಇಬ್ಬರು ಆನ್‌ಲೈನ್ ಪ್ಲಾಟ್‌ಫಾರ್ಮ್ ನಲ್ಲಿ ಬುಕ್ ಮಾಡಿದ್ದರು.
ಮೃತ ಅಮನ್ ಮೂಲತಃ ಹರಿಯಾಣದ ಸೋನೆಪತ್‌ಗೆ ಸೇರಿದವರಾಗಿದ್ದು, ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಫೆಬ್ರವರಿ 2 ರಂದು ನಮನ್ ಎಂಬ ವ್ಯಕ್ತಿ ಮಹಿಳಾ ಸ್ನೇಹಿತೆಯೊಂದಿಗೆ ನೋಯ್ಡಾದ ಎತ್ತರದ ಸೊಸೈಟಿಗೆ ಬಂದರು. ಫೆ.3ರಂದು ಆತ ತನ್ನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಡಿಸಿಪಿ ದ್ವಿವೇದಿ ಹೇಳಿದ್ದಾರೆ.