ಹೊಸದಿಗಂತ ವರದಿ ಮಡಿಕೇರಿ:
ಕುಡಿದ ಮತ್ತಿನಲ್ಲಿ ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ಕೊಡ್ಲಿಪೇಟೆ ಸಮೀಪದ ಕಟ್ಟೆಪುರ ಹಾಡಿಯಲ್ಲಿ ನಡೆದಿದೆ.
ಕೊಡ್ಲಿಪೇಟೆ ಹೋಬಳಿಯ ಬೆಸ್ಸೂರು ಗ್ರಾ.ಪಂ.ವ್ಯಾಪ್ತಿಯ ಕಟ್ಡೆಪುರ ಹಾಡಿಯ 45ವರ್ಷದ ಲಲಿತಾ ಮೃತ ದುರ್ದೈವಿಯಾಗಿದ್ದು, ಪುತ್ರ ರಾಜಶೇಖರ್ (22) ಆರೋಪಿ.
ಕುಡಿತದ ಚಟವಿದ್ದ ರಾಜಶೇಖರ್ ಬುಧವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದು ತಾಯಿಯೊಂದಿಗೆ ಗಲಾಟೆ ಮಾಡಿದ್ದಾನೆ. ನಂತರ ಗಲಾಟೆ ವಿಕೋಪಕ್ಕೆ ತಿರುಗಿ ದೊಣ್ಣೆಯಿಂದ ತಾಯಿಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಶನಿವಾರಸಂತೆ ವೃತ್ತ ನೀರಿಕ ಪರಶಿವಮೂರ್ತಿ ಅವರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.