ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಪುಷ್ಪ-2 ಚಿತ್ರತಂಡ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿದೆ.
ಪುಷ್ಪ-೨ನಲ್ಲಿ ರಶ್ಮಿಕಾ ಪಾತ್ರವನ್ನು ರಿವೀಲ್ ಮಾಡಲಾಗಿದ್ದು, ಗ್ಲಾಮರ್ ಹೆಚ್ಚಾಗಿರುವ ಫೋಟೊವೊಂದನ್ನು ಚಿತ್ರತಂಡ ಹಂಚಿಕೊಂಡಿದೆ.
ಶ್ರೀವಲ್ಲಿ ಪಾತ್ರದಿಂದಲೇ ಫೇಮಸ್ ಆಗಿರುವ ನಟಿಗೆ ಎಲ್ಲಿಗೆ ಹೋದರೂ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್ ಮಾಡುವಂತೆ ಬೇಡಿಕೆ ಇಡಲಾಗುತ್ತದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬೇಡಿಕೆ ಇರುವ ನಟಿ ಇತ್ತೀಚೆಗಷ್ಟೇ ಮಹಿಳಾ ಪ್ರಧಾನ ಸಿನಿಮಾ ರೈನ್ಬೋವನ್ನು ಒಪ್ಪಿಕೊಂಡಿದ್ದಾರೆ.
ರಶ್ಮಿಕಾ ಇದೇ ರೀತಿ ನೂರಾರು ಪಾತ್ರಗಳನ್ನು ಮಾಡಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.