ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇತ್ತೀಚೆಗೆ ಬೆಂಗಳೂರಿನ ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ ಮಾತೃ ವಂದನಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಒಂದನೇ ತರಗತಿಯ ಮಕ್ಕಳ ತಾಯಂದಿರನ್ನು ಶಾಲೆಗೆ ಆಹ್ವಾನಿಸಿ, ಮಕ್ಕಳಿಂದ ಅವರ ಪಾದಪೂಜೆ ಮಾಡಿಸಿದ್ದು ವಿಶೇಷ. ತಾಯಿಯ ಕುರಿತು ಪೂಜ್ಯ ಭಾವನೆಯನ್ನು ಮಕ್ಕಳಲ್ಲಿ ಉದ್ದೀಪಿಸುವ ಸಲುವಾಗಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯನ್ನು ಹಬ್ಬದ ಆಚರಣೆ ಮಾದರಿಯಲ್ಲಿ ಸಿಂಗರಿಸಿದ್ದಲ್ಲದೇ, ಶಿಕ್ಷಕರು ತಾಯಿಯ ಕುರಿತು ಮಕ್ಕಳ ಮನಸ್ಸಿನಲ್ಲಿ ನಾಟುವಂತೆ ಮಾತುಗಳನ್ನೂ ಆಡಿದರು.
ತಾಯಂದಿರಿಗೆ ಶಾಲೆಯ ಶಿಕ್ಷಕರು ಅರಿಶಿನ-ಕುಂಕುಮ, ಹೂ-ಬಳೆಗಳನ್ನಿತ್ತು ಸತ್ಕರಿಸಿದರು.