ಹೆಚ್ಚು ಪ್ರೋಟೀನ್ ಇರುವ ತಿಂಡಿಗಳನ್ನು ಹುಡುಕುತ್ತಿದ್ದೀರಾ? ಚಿಕನ್ 65 ನಂತೆ ರುಚಿಯಾಗಿದ್ದು, ಆದರೆ ಸಂಪೂರ್ಣ ಸಸ್ಯಹಾರಿ ಬೇಕು ಅಂದ್ರೆ “ಸೋಯಾ 65” ನಿಮಗೆ ಸರಿ ಆಯ್ಕೆ. ಇದು ಕ್ರಿಸ್ಪಿಯಾಗಿದ್ದು, ಟೀ ಟೈಮ್ ಸ್ನ್ಯಾಕ್ ಆಗಲಿ ಅಥವಾ ಮಧ್ಯಾಹ್ನದ ಊಟದ ಜೊತೆ ಸೈಡ್ ಡಿಶ್ ಆಗಲಿ, ಎಲ್ಲರಿಗೂ ತಕ್ಷಣ ಇಷ್ಟವಾಗುವ ರುಚಿ.
ಬೇಕಾಗುವ ಪದಾರ್ಥಗಳು:
ಸೋಯಾ ಚಂಕ್ಸ್ – 1 ಕಪ್
ಮೈದಾ – 2 ಟೇಬಲ್ ಸ್ಪೂನ್
ಕಾರ್ನ್ ಫ್ಲೋರ್ – 1 ಟೇಬಲ್ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – ½ ಟೀ ಸ್ಪೂನ್
ಹಸಿಮೆಣಸು ಪೇಸ್ಟ್ – 1 ಟೀ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲಿಂಬೆ ರಸ – 1 ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – ಡೀಪ್ ಫ್ರೈಗೆ
ಮಾಡುವ ವಿಧಾನ:
ಮೊದಲು ಸೋಯಾ ಚಂಕ್ಸ್‌ಗಳನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ತಣ್ಣೀರು ಹಾಕಿ ಚೆನ್ನಾಗಿ ತೊಳೆದು ನೀರು ಹಿಂಡಿಕೊಳ್ಳಿ.
ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಮೆಣಸಿನ ಪುಡಿ, ಧನಿಯಾ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಲಿಂಬೆ ರಸ ಸೇರಿಸಿ. ಸ್ವಲ್ಪ ನೀರು ಹಾಕಿ ದಪ್ಪ ಪೇಸ್ಟ್ ತಯಾರಿಸಿ, ಅದಕ್ಕೆ ನೆನೆಸಿದ ಸೋಯಾ ಚಂಕ್ಸ್‌ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಸೋಯಾ ಚಂಕ್ಸ್‌ಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
ಬೇರೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕರಿಬೇವು, ಹಸಿಮೆಣಸು, ಈರುಳ್ಳಿ ಹಾಕಿ ಹುರಿದು, ಫ್ರೈ ಮಾಡಿದ ಸೋಯಾ ತುಂಡುಗಳನ್ನು ಅದಕ್ಕೆ ಸೇರಿಸಿ ಮಿಶ್ರಣ ಮಾಡಿ.

