March 16, 2026
Monday, March 16, 2026
spot_img

ಕಾದ ಕಾವಲಿಯಂತಾದ ರಾಜ್ಯ: ಬೆಂಗಳೂರಿನಲ್ಲಿ ತಾಪಮಾನ ಏರಿಕೆ, ಹುಷಾರಾಗಿರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಉಷ್ಣ ಅಲೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಅಗತ್ಯವೆಂದು ಅರೋಗ್ಯ ತಜ್ಞರು ಸೂಚಿಸಿದ್ದಾರೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಾರ್ಚ್ ತಿಂಗಳಿಂದ ಉಷ್ಣತೆಯ ಅಲೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ಕಾಣಬಹುದು. ತೀವ್ರ ಸೂರ್ಯಕಿರಣಗಳು ಚರ್ಮ ಸುಡುವಿಕೆ, ಉರಿ, ಕಿರಿಕಿರಿ ಹಾಗೂ ಚರ್ಮದ ಬಣ್ಣ ಕಪ್ಪಾಗುವಂತೆ ಮಾಡಬಹುದು ಎಂದು ಎಚ್ಚರಿಸಿದ್ದಾರೆ. ವೃದ್ಧರು, ಮಕ್ಕಳು, ಹೊರಾಂಗಣದಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು ಮತ್ತು ಆರೋಗ್ಯ ಸಮಸ್ಯೆ ಇರುವವರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.

ಇದನ್ನೂ ಓದಿ:

ಚರ್ಮ ತಜ್ಞರು UVA ಮತ್ತು UVB ವಿಕಿರಣವು ಚರ್ಮದ DNA ಗೆ ಹಾನಿ ಮಾಡುತ್ತವೆ ಎಂದು ಸೂಚಿಸಿದ್ದಾರೆ. UVB ವಿಕಿರಣ ಕಾಲಜನ್ ನಾಶ, ಉರಿ ಮತ್ತು ಜೀವಕೋಶ ಹಾನಿಗೆ ಕಾರಣವಾಗಬಹುದು. ಇದರಿಂದ ಹೈಪರ್ಪಿಗ್ಮೆಂಟೇಶನ್ ಮತ್ತು ಅಕಾಲಿಕ ಚರ್ಮ ವಯಸ್ಸಾಗುವಿಕೆ ಸಂಭವಿಸಬಹುದು.

ಸುರಕ್ಷತಾ ಕ್ರಮಗಳಾಗಿ ಹಗುರವಾದ ಹತ್ತಿ ಬಟ್ಟೆ ಧರಿಸುವುದು, ಟೋಪಿ ಅಥವಾ ಛತ್ರಿ ಬಳಸುವುದು, ಬಿಸಿಲು ತೀವ್ರವಾಗಿರುವಾಗ ಹೊರಗೆ ಹೋಗದಿರಿ. ಸಾಕಷ್ಟು ನೀರು ಕುಡಿಯಿರಿ, ತಣ್ಣಗಿರುವ ಆಹಾರ ಸೇವಿಸಿ, ಉಪ್ಪು-ಖಾರ ಕಡಿಮೆ ಮಾಡುವುದು ಮುಖ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !