ಹೊಸದಿಗಂತ ವರದಿ,ಸೋಮವಾರಪೇಟೆ:
ವ್ಯಕ್ತಿಯೊಬ್ಬರ ಜಮೀನಿನ ಸರ್ವೆಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ಸರ್ವೆಯರ್’ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಸರ್ವೆ ಇಲಾಖೆಯ ಸರ್ವೆಯರ್ ಮಾದೇಗೌಡ ಎಂಬವರೇ ಲೋಕಾ ಬಲೆಗೆ ಬಿದ್ದವರಾಗಿದ್ದಾರೆ.
ಶನಿವಾರಸಂತೆಯ ಹೆಮ್ಮನೆ ಜಮೀನಿಗೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿ ಅಕ್ರಂ ಪಾಷ ಎಂಬವರಿಂದ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಾದೇಗೌಡ, ಒಂದು ಸಾವಿರ ರೂ.ಗಳನ್ನು ಹಿಂದೆಯೇ ಪಡೆದಿದ್ದರೆನ್ನಲಾಗಿದೆ. ಉಳಿದ ನಾಲ್ಕು ಸಾವಿರ ರೂ.ಗಳನ್ನು ಮಂಗಳವಾರ ಮಧ್ಯಾಹ್ನ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ಪೆಕ್ಟರ್ ಲೋಕೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.