August 13, 2026
Thursday, August 13, 2026
spot_img

ಹಾಲು ತುಂಬಿದ್ದ ಟ್ಯಾಂಕರ್‌ ಪಲ್ಟಿಯಾಗಿ ಕ್ಷೀರಸಾಗರ: ಪಾತ್ರೆ ಹಿಡಿದುಕೊಂಡು ಓಡಿ ಬಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಸ್ಥಾನದ ಕೋಟಪುತ್ಲಿ ಬಳಿಯ ದೆಹಲಿ-ಜೈಪುರ ಹೆದ್ದಾರಿಯಲ್ಲಿ ಹಾಲು ತುಂಬಿದ್ದ ಟ್ಯಾಂಕರ್‌ ಪಲ್ಟಿಯಾಗಿದ್ದು, ಜನ ಬಾಟಲಿ, ಪಾತ್ರೆಯಲ್ಲಿ ಹಾಲು ತುಂಬಿಕೊಂಡು ಹೋಗ್ತಿದ್ದಾರೆ.

ಹಾಲಿನ ಟ್ಯಾಂಕರ್‌ ಪಲ್ಟಿ ಹೊಡೆದ ನಂತರ ನೂರಾರು ಲೀಟರ್‌ ಹಾಲು ನೆಲಕ್ಕೆ ಚಲ್ಲಿ ರಸ್ತೆಯೆಲ್ಲಾ ಕ್ಷೀರಸಾಗರದಂತೆ ಕಾಣಿಸಿದೆ. ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಬಕೆಟ್, ಬಿಂದಿಗೆ, ಪ್ಲಾಸ್ಟಿಕ್ ಬಾಟಲಿ ಹಾಗೂ ಕ್ಯಾನ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಚೆಲ್ಲುತ್ತಿದ್ದ ಹಾಲನ್ನು ತುಂಬಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಜನರು ಸಿಕ್ಕ ಸಿಕ್ಕ ಪಾತ್ರೆ, ಬಾಟಲಿ ಎಲ್ಲದರಲ್ಲೂ ಹಾಲು ತುಂಬಿಕೊಂಡು ಹೋಗುತ್ತಿದ್ದಾರೆ. ಡ್ರೈವರ್‌ ಕಥೆ ಏನಾಯ್ತು ನೋಡೋ ಬದಲು ಈ ರೀತಿ ಮಾಡ್ತಿರೋದು ತಪ್ಪು ಎಂದು ಕೆಲವರು ಹೇಳಿದ್ರೆ ರಸ್ತೆಯಲ್ಲಿ ವೇಸ್ಟ್‌ ಆಗೋ ಬದಲು ಮನೆಯಲ್ಲಿ ಬಳಕೆ ಮಾಡ್ತೀವಿ ಎಂದು ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !