ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿಯ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಬಳಿ ಮನೆಯೊಂದರ ಮೇಲ್ಛಾವಣಿ ಕುಸಿದು ಶಿಕ್ಷಕಿ ಮೃತಪಟ್ಟಿದ್ದಾರೆ.
ಅನಿತಾ ಮಠಪತಿ ಮೃತ ದುರ್ದೈವಿ, ಇವರು ಸಿದ್ದಭಾರತಿ ವಿದ್ಯಾಮಂದಿರದಲ್ಲಿ ಶಿಕ್ಷಕಿಯಾಗಿದ್ದರು. ಕಾರ್ಯಕ್ರಮವೊಂದಕ್ಕೆ ಹೋಗಿ ಬಂದು ಮನೆಯ ಮುಂದೆ ಕುಳಿತುಕೊಂಡಿದ್ದರು.
ಬಳಿಕ ಮಗನಿಗೆ ಮೊಬೈಲ್ ತೆಗೆದುಕೊಂಡು ಬಾ ಎಂದು ಹೇಳಿದ ಕೂಡಲೇ ಏಕಾಏಕಿ ಮನೆಯ ಮೇಲ್ಛಾವಣಿ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಪುತ್ರ ಬಚಾವ್ ಆಗಿದ್ದು ಶಿಕ್ಷಕಿ ಅನಿತಾ ಮೃತಪಟ್ಟಿದ್ದಾರೆ.