ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಇಂದು ಬ್ರಿಟನ್‌ನಿಂದ 40 ತಂತ್ರಜ್ಞರ ತಂಡ ಆಗಮಿಸಲಿದೆ.
ಈ ತಂತ್ರಜ್ಞರ ತಂಡ ಎಫ್-35 ಯುದ್ಧ ವಿಮಾನದ ರಿಪೇರಿಯ ಕೊನೆಯ ಯತ್ನ ನಡೆಸಲಿದ್ದಾರೆ. ಈ ಯತ್ನ ವಿಫಲವಾದರೆ, ವಿಮಾನದ ಬಿಡಿ ಭಾಗಗಳನ್ನು ಬೇರ್ಪಡಿಸಿ ಏರ್‌ಲಿಫ್ಟ್ ಮಾಡಲಿದ್ದಾರೆ.
ಜೂ.14ರಂದು ದಿಢೀರ್ ಇಂಧನ ಕೊರತೆಯಿಂದಾಗಿ ಬ್ರಿಟನ್ನಿನ ಅತ್ಯಾಧುನಿಕ ಎಫ್-35 ಯುದ್ಧ ವಿಮಾನ ತಿರುವನಂತಪುರಂನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹಿಂದೂಮಹಾಸಾಗರದಲ್ಲಿ ಭಾರತೀಯ ವಾಯುಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿ ಬ್ರಿಟನ್‌ಗೆ ತೆರಳುವಾಗ ಇಂಧನ ಖಾಲಿಯಾಗಿದೆ ಎಂದು ಲ್ಯಾಂಡಿಂಗ್‌ಗೆ ಅನುಮತಿ ಕೇಳಿ ಇಳಿಸಲಾಗಿತ್ತು. ಇದಾದ ಬಳಿಕ ತಾಂತ್ರಿಕ ದೋಷ ಕಂಡು ಬಂದಿತ್ತು.