BREAKING | ಬೆಳ್ಳಂಬೆಳಗ್ಗೆ ಕಾರ್‌-ಖಾಸಗಿ ಬಸ್‌ ನಡುವೆ ಭೀಕರ ಅಪಘಾತ: ಆರು ಮಂದಿ ದುರ್ಮರಣ

ಹೊಸದಿಗಂತ ವರದಿ ವಿಜಯಪುರ:

ಮಹೀಂದ್ರಾ ಸ್ಕಾರ್ಪಿಯೋ ಕಾರ್, ವಿಆರ್ ಎಲ್ ಖಾಸಗಿ ಬಸ್, ಕಂಟೇನರ್ ವಾಹನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, 6 ಜನರು ದಾರುಣ ಸಾವಿಗೀಡಾದ ಘಟನೆ ಜಿಲ್ಲೆಯ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಬೆಳಗ್ಗೆ ನಡೆದಿದೆ.

ಸೊಲ್ಲಾಪುರ ಕಡೆಯಿಂದ ಹೋಗುತ್ತಿದ್ದ ಸ್ಕಾರ್ಪಿಯೋ ಕಾರ್, ಮುಂಬೈನಿಂದ ಬಳ್ಳಾರಿ ಕಡೆಗೆ ಹೋಗುತ್ತಿದ್ದ ವಿಆರ್ ಎಲ್ ಬಸ್, ಕಂಟೇನರ್ ಮಧ್ಯೆ ಭೀಕರ ಡಿಕ್ಕಿಯಾಗಿ, ಸ್ಕಾರ್ಪಿಯೋದಲ್ಲಿರುವ 5 ಜನರು, ವಿಆರ್ ಎಲ್ ಬಸ್ ಚಾಲಕ ಸ್ಥಳದಲ್ಲೇ ಅಸುನೀಗಿದ್ದಾರೆ.

ಮೃತರ ಗುರುತು, ಪತ್ತೆ ಇನ್ನು ತಿಳಿದು ಬಂದಿಲ್ಲ.ಸ್ಥಳಕ್ಕೆ ಮನಗೂಳಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಂಚಾರಕ್ಕೆ ತಡೆಯಾಗಿದ್ದು, ಇಲ್ಲಿನ ಚತುಷ್ಪಥ 50 ರ ರಾಷ್ಟ್ರೀಯ ಹೆದ್ದಾರಿಯ ಮತ್ತೊಂದು ಬದಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!