ಹಾಸನದಲ್ಲೊಂದು ಭೀಕರ ಘಟನೆ: ಬೈಕ್ ಸವಾರನ ಮೇಲೆಯೇ ಹರಿದು ಹೋದ ವಾಹನಗಳು

ಹೊಸದಿಗಂತ ವರದಿ ಹಾಸನ :

ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಹಿಂದೆಯಿಂದ ವೇಗವಾಗಿ ಬಂದಂತಹ ಮೂರ್ನಾಲ್ಕು ವಾಹನಗಳು ಹರಿದು ಬೈಕ್‌ ಸವಾರನ ದೇಹ ನಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬೈಪಾಸ್‌ನಲ್ಲಿ ನಡೆದಿದೆ. ಹಾಸನ ನಗರದ ಗೌರಿಕೊಪ್ಪಲಿನ‌ ನಿವಾಸಿ ರಾಕೇಶ್.ವಿ.ಆರ್. (27) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಮೃತ ರಾಕೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಚನ್ನರಾಯಪಟ್ಟಣದ ಬೈಪಾಸ್‌ನಲ್ಲಿ ಬೈಕ್‌ನಲ್ಲಿ ವೇಗವಾಗಿ ಬರುವ ವೇಳೆ ನಿಯಂತ್ರಣಕ್ಕೆ ಸಿಗದೆ ರಸ್ತೆಗೆ ಬಿದಿದ್ದಾನೆ.‌ ಈ ವೇಳೆ ಹಿಂದೆಯಿಂದ ಬಂದಂತಹ ಮೂರ್ನಾಲ್ಕು ವಾಹನಗಳು ಯುವಕನ ಮೇಲೆ ಹರಿದಿವೆ. ವಾಹನಗಳು ಹರಿದ ರಭಸಕ್ಕೆ ರಾಕೇಶ್ ದೇಹ ನಜ್ಜುಗುಜ್ಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ರಾಕೇಶ್ ಮೇಲೆ ಹರಿದ ಕೆಲವು ವಾಹನ ಚಾಲಕರು ನಿಲ್ಲಿಸದೆ ಪರಾರಿಯಾದಾರೆ, ಇನ್ನೊಂದು ಕಾರು ರಾಕೇಶ್ ಮೇಲೆ ಹತ್ತಿಸುವುದನ್ನು ನಿಯಂತ್ರಿಸಲು ಹೋಗಿ ಡಿವೈಡರ್‌ಗೆ ಗುದ್ದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

KA-13 E Y 7776 ನಂಬರ್‌ನ ಕೆಟಿಎಂ ಬೈಕ್.
ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here