April 8, 2026
Wednesday, April 8, 2026
spot_img

ಜಾತ್ಯತೀತತೆಗೆ ಧಕ್ಕೆ? ಬಿಗ್ ಸ್ಕ್ರೀನ್ ಮೇಲೆ ಬರಲು ಸಜ್ಜಾದ ವಿವಾದಾತ್ಮಕ ಚಿತ್ರದ ಬಗ್ಗೆ ಪಿಣರಾಯಿ ಕಾಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ‘ದಿ ಕೇರಳ ಸ್ಟೋರಿ’ ಚಿತ್ರದ ಸೀಕ್ವೆಲ್ ಈಗ ಸಿದ್ಧವಾಗಿದೆ. ಫೆಬ್ರವರಿ 27ರಂದು ಚಿತ್ರಮಂದಿರಕ್ಕೆ ಬರಲಿರುವ ಈ ಸಿನಿಮಾ, ಬಿಡುಗಡೆಗೂ ಮುನ್ನವೇ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮೊದಲ ಭಾಗದಂತೆಯೇ ಈ ಬಾರಿಯೂ ಚಿತ್ರದ ಕಥಾವಸ್ತು ಸಮಾಜದಲ್ಲಿ ಬಿರುಕು ಮೂಡಿಸುವಂತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಇದೊಂದು “ಕೋಮುವಾದಿ ಅಜೆಂಡಾ” ಹೊಂದಿರುವ ಸುಳ್ಳಿನ ಕಂತೆ ಎಂದು ಕರೆದಿದ್ದಾರೆ. “ನಮ್ಮ ರಾಜ್ಯದ ಜಾತ್ಯತೀತ ಪರಂಪರೆಯನ್ನು ಕೆಡಿಸುವ ಇಂತಹ ಪ್ರಯತ್ನಗಳನ್ನು ಕೇರಳದ ಜನರು ಎಂದಿಗೂ ಒಪ್ಪುವುದಿಲ್ಲ. ಸತ್ಯವನ್ನು ಮರೆಮಾಚಿ ಭಯೋತ್ಪಾದನೆಯ ಕೇಂದ್ರವೆಂಬಂತೆ ಚಿತ್ರಿಸುವ ನಿರೂಪಣೆಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಅವರು ಕರೆ ನೀಡಿದ್ದಾರೆ.

ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರ ಈ ಚಿತ್ರಕ್ಕೆ ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಅದಿತಿ ಭಾಟಿಯಾ, ಐಶ್ವರ್ಯಾ ಊಜಾ ಮತ್ತು ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !