ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂದಿನಿಂತೆ ರಾತ್ರಿ ತಾಯಿ ಹಾಲು ಕುಡಿಯುತ್ತಾ ಮಲಗಿದ್ದ ಮಗು ಬೆಳಗ್ಗೆ ಕರೆದ ಯಾವ ಮಾತಿಗೂ ಓಗೊಡಲೇ ಇಲ್ಲ..
ಹೌದು, ತಿರುವನಂತಪುರದಲ್ಲಿ ಘಟನೆ ನಡೆದಿದ್ದು, ತಾಯಿಯ ಎದೆಹಾಲು ಶ್ವಾಸನಾಳದಲ್ಲಿ ಸಿಲುಕಿ ಮಗು ಮೃತಪಟ್ಟಿದೆ.
ಜಯಕೃಷ್ಣನ್ ಹಾಗೂ ಜನಿಮೊಲ್ ದಂಪತಿಯ ಮೂರು ತಿಂಗಳ ಮಗು ಜಿತೇಶ್‌ಗೆ ಎಂದಿನಂತೆ ಹಾಲು ಕುಡಿಸಿ ಮಲಗಿಸಿದ್ದಾರೆ. ಮರುದಿನ ಬೆಳಗ್ಗೆ ಮಗು ಎಂದಿನಂತೆ ಮಾಮೂಲಿ ಸಮಯಕ್ಕೆ ಎದ್ದಿಲ್ಲ. ಗಾಬರಿಯಾದ ಪೋಷಕರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗುವಿನ ಹೃದಯಬಡಿತದಲ್ಲಿ ವ್ಯತ್ಯಾಸವಿದೆ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದಾರೆ. ನಂತರ ಬೇರೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.
ಶ್ವಾಸನಾಳದಲ್ಲಿ ಹಾಲು ಸಿಲುಕಿ ಮಗುವಿಗೆ ಉಸಿರಾಡಲು ಆಗಿಲ್ಲ. ಈ ಕಾರಣದಿಂದ ಮಗು ಮೃತಪಟ್ಟಿದೆ. ಮಕ್ಕಳಿಗೆ ಬಿಕ್ಕಳಿಕೆ ಬಂದಾಗ ಹಾಲು ಕುಡಿಸುವುದು, ಹಸುಗೂಸುಗಳಿಗೆ ಮಲಗಿಸಿಕೊಂಡು ಹಾಲು ಕುಡಿಸಿದರೆ ಶ್ವಾಸನಾಳಕ್ಕೆ ಹಾಲು ಹೋಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳ ಬಗೆಗಿನ ಸಣ್ಣ ಅನುಮಾನವನ್ನೂ ನಿರ್ಲಕ್ಷ್ಯ ಮಾಡಬೇಡಿ, ವೈದ್ಯರ ಸಲಹೆ ಪಡೆಯಿರಿ.