ಉಡುಪಿಯಲ್ಲಿ ರೈಲು ಹಳಿಯ ವಿದ್ಯುತ್ ಕಂಬದ ಮೇಲೆ ಕುಸಿದ ಮರ: ರೈಲು ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉಡುಪಿಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ರೈಲ್ವೇ ಟ್ರ್ಯಾಕ್ ನ ವಿದ್ಯುತ್ ಕಂಬದ ಮೇಲೆ ಮರವೊಂದು ಕುಸಿದು ಬಿದ್ದಿರುವ ಘಟನೆ ಉಡುಪಿ – ಬಾರ್ಕೂರು ಮಾರ್ಗ ಮಧ್ಯೆ ನಡೆದಿದೆ.

ಇದರ ಪರಿಣಾಮ ಸುಮಾರು ಎರಡು ಗಂಟೆಗೂ ಅಧಿಕ ಸಮಯ ರೈಲು ಸ್ಥಗಿತಗೊಂಡಿದೆ.

ಇದರಿಂದಾಗಿ ದೆಹಲಿ-ಕೇರಳ ನಡುವೆ ಸಂಚರಿಸುವ ನಿಜಾಮುದ್ದೀನ್- ತಿರುವನಂತಪುರ ಎಕ್ಸ್ ಪ್ರೆಸ್ ರೈಲು ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸ್ಥಗಿತಗೊಂಡಿತು.
ರೈಲ್ವೇ ಇಲಾಖೆಯ ಅಧಿಕಾರಿಗಳು ಮರ ತೆರವು ಕಾರ್ಯ ನಡೆಸಿದ ಬಳಿಕ ಮತ್ತೆ ರೈಲು ಸಂಚಾರ ಆರಂಭಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!