ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗಳೂ ಹುಬ್ಬೇರಿಸುವಂಥ ಅಪೂರ್ವ ಕೆಲಸವೊಂದನ್ನು ಮಾಡಿ ಗಮನ ಸೆಳೆದಿದೆ. 5, 6 ಮತ್ತು 7ನೇ ತರಗತಿಯ 32 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ಅನುಭವ ನೀಡುವ ಮೂಲಕ, ಸರ್ಕಾರಿ ಶಾಲೆಯೊಂದು ಮಕ್ಕಳನ್ನು ಫ್ಲೈಟ್ ಟೂರ್ ಕರೆದುಕೊಂಡು ಹೋಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸರ್ಕಾರಿ ಶಾಲೆಯ ಟ್ರಿಪ್‌ಗಳು ಸಾಮಾನ್ಯವಾಗಿ ಲೋ ಬಜೆಟ್‌ನವಾಗಿರುತ್ತವೆ. ಸುತ್ತಮುತ್ತಲಿನ ಸ್ಥಳಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಇಲ್ಲಿ ಮಕ್ಕಳನ್ನು ಬೆಂಗಳೂರಿಗೆ ಫ್ಲೈಟ್‌ನಲ್ಲಿ ಕರೆದುಕೊಂಡು ಬರಲಾಗಿದೆ. ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಮಕ್ಕಳು ಶಿವಮೊಗ್ಗದಲ್ಲಿ ಫ್ಲೈಟ್ ಹತ್ತಿ ಬೆಂಗಳೂರಿಗೆ ತಲುಪಿದ್ದಾರೆ. ಫ್ಲೈಟ್‌ನಲ್ಲಿ ಕುಳಿತ ಮಕ್ಕಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಇದನ್ನೂ ಓದಿ: Digestion | ಜೀರ್ಣ ಆಗೋಕೆ ಯಾವ ಹಣ್ಣಿಗೆ ಎಷ್ಟು ಹೊತ್ತು ಬೇಕು ಗೊತ್ತಾ?
ವಯಸ್ಸಾದವರು ಕೂಡ ಇನ್ನೂ ಒಂದು ಫ್ಲೈಟ್ ಟ್ರಿಪ್ ಮಾಡಿರೋದಿಲ್ಲ. ಆದರೆ ಈ ಪುಟಾಣಿಗಳಿಗೆ ಇಷ್ಟು ಸಣ್ಣ ವಯಸ್ಸಿನಲ್ಲೇ ಫ್ಲೈಟ್ ಹತ್ತುವ ಭಾಗ್ಯ ಸಿಕ್ಕಿದೆ.
ಈ ವಿಶಿಷ್ಟ ಪ್ರವಾಸ ಶಿಕ್ಷಕರು, ಪೋಷಕರು, ದಾನಿಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅವರ ಸಹಕಾರದಿಂದ ಸಾಧ್ಯವಾಗಿದೆ. ಮಕ್ಕಳಿಗೆ ಪುಸ್ತಕದ ಪಾಠಕ್ಕಷ್ಟೇ ಸೀಮಿತವಲ್ಲದೆ, ಜೀವನ ಪಾಠವನ್ನೂ ಕಲಿಸಬೇಕು ಎಂಬ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

