ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 16.5 ಕಿ.ಮೀ ಸುರಂಗ ಮಾರ್ಗವನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಹೆಬ್ಬಾಳದ ಬಳಿಯ ಎಸ್ಟೀಮ್ ಮಾಲ್‌ನಿಂದ ಹೊಸೂರು ರಸ್ತೆ ಸಿಲ್ಕ್ ಬೋರ್ಡ್‌ವರೆಗೆ 125 ಅಡಿ ಆಳದಿಂದ 180 ಅಡಿ ಆಳದಲ್ಲಿ ಅವಳಿ ಸುರಂಗ ಮಾರ್ಗ ನಿರ್ಮಿಸಲು 5 ವರ್ಷಗಳ ಟೆಂಡರ್ ಕರೆಯಲಾಗುತ್ತಿದ್ದು, 30 ವರ್ಷಗಳ ಕಾಲ ಟೋಲ್ ಸಂಗ್ರಹಕ್ಕೂ ಲೆಕ್ಕಾಚಾರ ಹಾಕಲಾಗಿದೆ.
ಬೆಂಗಳೂರಿನಲ್ಲಿ ಹಾಲಿ ಇರುವ ರಸ್ತೆಗಳು, ಜನವಸತಿ ಪ್ರದೇಶ ಹಾಗೂ ಮೆಟ್ರೋ ನಿರ್ಮಾಣದಿಂದಾಗಿ ಮುಂಬರುವ ದಿನಗಳಲ್ಲಿ ರಸ್ತೆ ಅಗಲೀಕರಣ ಮಾಡಿ ಟ್ರಾಫಿಕ್ ನಿಯಂತ್ರಣ ಮಾಡುವುದಕ್ಕೆ ಸಾಧ್ಯವೇ ಇಲ್ಲದಂತಾಗಿದೆ. ಕಾರಣ ರಸ್ತೆ ಅಗಲ ಮಾಡಲು ಭೂಮಿ ಲಭ್ಯತೆಯಿಲ್ಲ. ಜೊತೆಗೆ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಜನರು ಒಪ್ಪಿಗೆ ಕೊಡದೇ ಭೂಮಿ ನಿರಾಕರಿಸುತ್ತಾರೆ. ಹೀಗಾಗಿ, ಸುರಂಗ ಮಾರ್ಗದ ಮೂಲಕ ಸಂಚಾರ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದೆ.