ತುಮಕೂರು ವಿವಿಯಲ್ಲಿ ಎರಡು ದಿನಗಳ ಮಾಧ್ಯಮ ಹಬ್ಬಕ್ಕೆ ಚಾಲನೆ

ಹೊಸದಿಗಂತ ವರದಿ ತುಮಕೂರು:

ವಿವಾದಕ್ಕೆ ಗ್ರಾಸವಾಗಿದ್ದ ತುಮಕೂರು ವಿವಿ ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗದ ಇಂಪ್ರೆಷನ್ 2023 ಎರಡು ದಿನಗಳ ಮಾಧ್ಯಮ ಹಬ್ಬಕ್ಕೆ ಗುರುವಾರ ಚಾಲನೆ ದೊರೆಯಿತು.

ಕಾರ್ಯ ಕ್ರಮಕ್ಕೆ ಪತ್ರಕರ್ತ ರಾದ ಅಜಿತ್ ಹನುಮಕ್ಕನವರ್ ಆಹ್ವಾನಿಸಿರುವುದನ್ನು ವಿರೋಧಿಸಿ ಹೊರಗಡೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ದಿಂದ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ಒಳಗಡೆ ವಿಜ್ಞಾನ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಅಜಿತ್ ಹನುಮಕ್ಕನವರ್ ಪಾಲ್ಗೊಂಡು ಎರಡು ದಿನಗಳ ಮಾಧ್ಯಮ ಹಬ್ಬ ಕ್ಕೆ ಚಾಲನೆ ನೀಡಿದರು.

ಈ ವೇಳೆ ಕುಲಪತಿ ಡಾ. ವೆಂಕಟೇಶ್ವರಲು, ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ. ಕೆ. ರವಿ, ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಕುಲ ಸಚಿವೆ ನಾಹಿದ ಜಂಜಂ, ಪ್ರಸನ್ನ ಕುಮಾರ್ ಇತರರಿದ್ದರು.
ವಿವಿ ಹೊರಗಡೆ ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಜಿತ್ ಹನುಮಕ್ಕನವರ್ ಅವರನ್ನು ಪೊಲೀಸ್ ಬೆಂಗಾವಲಲ್ಲಿ ಕಾರ್ಯ ಕ್ರಮಕ್ಕೆ ಕರೆತರಲಾಯಿತು. ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮ ಶಿಕ್ಷಣದ ನಡುವೆ ಏಕರೂಪತೆ ಇರಬೇಕು ಎಂದು ಕೊಪ್ಪಳ ವಿವಿ ಕುಲಪತಿ ಬಿ.ಕೆ.ರವಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!