ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಒಳಗಾಗಿ ಎರಡು ವರ್ಷದ ಕಂದಮ್ಮ ಮೃತಪಟ್ಟಿದೆ.
ನೈಗ್ಲೇರಿಯಾ ಫೌಲೆರಿ ಎನ್ನುವ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಇತ್ತೀಚೆಗಷ್ಟೇ ಕೇರಳದಲ್ಲಿ 15 ವರ್ಷದ ಬಾಲಕ ಮೃತಪಟ್ಟಿದ್ದ.
ಇದೀಗ ಅಮೆರಿಕದ ನೆವಾಡಾದಲ್ಲಿ ಎರಡು ವರ್ಷದ ಮಗು ಮೆದುಳು ತಿನ್ನುವ ಸೋಂಕಿಗೆ ಬಲಿಯಾಗಿದೆ. ಕೆಲ ದಿನಗಳಿಂದ ಮಗುವಿಗೆ ವಿಪರೀತ ಜ್ವರ ಬಾಧಿಸುತ್ತಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಅಮೀಬಾ ಬಗ್ಗೆ ತಿಳಿದಿದೆ. ಕೆಲವು ದಿನಗಳ ನಂತರ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ನೀರಿನಲ್ಲಿ ಆಟವಾಡುವಾಗ ಮೂಗು, ಬಾಯಿ ಅಥವಾ ಕಿವಿಯ ಮೂಲಕ ಈ ಅಮೀಬಾ ದೇಹವನ್ನು ಸೇರುತ್ತದೆ. ನಂತರ ಮೆದುಳಿನ ಮೇಲೆ ದಾಳಿ ಮಾಡುತ್ತದೆ. ಇದು ಅಪರೂಪವಾದರೂ ಮಾರಣಾಂತಿಕವಾಗಿದೆ. ಅಮೀಬಾ ದೇಹದ ಒಳ ಹೊಕ್ಕಿದ್ದರೆ 12 ದಿನಗಳ ನಂತರ ಒಂದೊಂದೆ ಲಕ್ಷಗಳು ಕಾಣಿಸುತ್ತವೆ. ತಲೆನೋವು, ಜ್ವರ, ವಾಕರಿಕೆ ಹಾಗೂ ಕೋಮಾ ಸ್ಥಿತಿಯೂ ಸಾಧ್ಯವಿದೆ.