ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾರೊ ದರ ಗ್ರಾಹಕರಿಗೆ ಬಿಸಿಯಾಗಿದ್ರೆ ರೈತರಿಗೆ ಚಿನ್ನವಾಗಿದೆ, ಟೊಮ್ಯಾಟೊ ಬೆಳೆದ ರೈತ ತನ್ನ ಬೆಳೆಯನ್ನು ಚಿನ್ನ ಕಾಪಾಡಿದ ಹಾಗೆಯೇ ಕಾಪಾಡ್ತಾನೆ. ಆದರೆ ಟೊಮ್ಯಾಟೊ ಶತಕ ದಾಟಿದ ಹಿನ್ನೆಲೆ ಟೊಮ್ಯಾಟೊ ತುಂಬಿದ್ದ ಬೊಲೆರೊ ಕಳ್ಳತನವಾಗಿದ್ದು, ರೈತ ಕಣ್ಣೀರಿಟ್ಟಿದ್ದಾನೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಮಾರುಕಟ್ಟೆಗೆ ಹೊತ್ತೊಯ್ಯುವಾಗ ಬೊಲೆರೋ ಕಳ್ಳತನವಾಗಿದೆ. ಎರಡು ಸಾವಿರಕೆಜಿಯಷ್ಟು ಟೊಮ್ಯಾಟೊ ಇದ್ದ ಬೊಲೆರೊ ವಾಹನವನ್ನೇ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಘಟನೆ ನಡೆದಿದ್ದು, ರೈತ ಹಿರಿಯೂರಿನಿಂದ ಟೊಮ್ಯಾಟೊವನ್ನು ಕೋಲಾರಕ್ಕೆ ಸಾಗಿಸುತ್ತಿದ್ದ. ಮೂವರು ಖದೀಮರು ಬೊಲೆರೋ ಹಿಂಬಾಲಿಸಿದ್ದು, ಬೊಲೆರೋ ಅಡ್ಡಗಟ್ಟಿದ್ದಾರೆ. ನಂತರ ನಿಮ್ಮ ಬೊಲೆರೊ ನಮ್ಮ ಕಾರ್‌ಗೆ ಟಚ್ ಆಗಿದೆ, ನಮಗೆ ದುಡ್ಡು ಕೊಡಿ ಎಂದು ರೈತ ಹಾಗೂ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ದುಡ್ಡಿಲ್ಲ ಎಂದು ರೈತ ಹೇಳಿದ್ದು, ಆನ್‌ಲೈನ್ ಟ್ರಾನ್ಸ್‌ಫರ್ ಮಾಡಿ ಎಂದು ಪಟ್ಟು ಹಿಡಿದ್ದಾರೆ. ನಂತರ ಟೊಮ್ಯಾಟೊ ತುಂಬಿದ ಬೊಲ್ಯಾರೊದಲ್ಲಿ ಖದೀಮರು ಹತ್ತಿ ಕುಳಿತಿದ್ದಾರೆ. ಚಿಕ್ಕಜಾಲದ ಬಳಿ ರೈತನನ್ನು ಹೊರಹಾಕಿ ಡ್ರೈವರ್ ಸಮೇತ ಟೊಮ್ಯಾಟೊ ಜೊತೆ ಎಸ್ಕೇಪ್ ಆಗಿದ್ದಾರೆ. ರೈತ ದೂರು ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.