ಭಾರತೀಯ ಪಾಕಶಾಸ್ತ್ರದಲ್ಲಿ ವಿಶೇಷ ಸ್ಥಾನ ಪಡೆದಿರುವ ಹುರುಳಿಕಾಳನ್ನು (Horse Gram) ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತಾರೆ. ಇದರಲ್ಲಿ ಪೌಷ್ಟಿಕಾಂಶಗಳಾಗಿರುವುದರಿಂದ, ದಿನನಿತ್ಯದ ಆಹಾರದಲ್ಲಿ ಇದನ್ನು ಅಳವಡಿಸುವುದು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇಂದೀಗ ನಾವು ಹುರುಳಿಕಾಳಿನ ಸಾರು ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಹುರುಳಿಕಾಳು -ಅರ್ಧ ಕಪ್
ಟೊಮೆಟೊ -2
ಬೆಳ್ಳುಳ್ಳಿ 3
ನಿಂಬೆ ಹಣ್ಣು- 1 *
ಹುಣಸೆಹಣ್ಣೂ- ಸ್ವಲ್ಪ
ಇಂಗು ಚಿಟಿಕೆ
ಕರಿಮೆಣಸಿನ ಪುಡಿ- 1 ಚಮಚ
ಜೀರಿಗೆ- 1 ಚಮಚ
ಸಾಸಿವೆ -1 ಚಮಚ
ಒಣ ಮೆಣಸು 2
ಕರಿಬೇವಿನ ಎಲೆ- ಸ್ವಲ್ಪ
ಸಕ್ಕರೆ – ಅರ್ಧ ಚಮಚ
ಅಡುಗೆ ಎಣ್ಣೆ – ಅರ್ಧ ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
ಮೊದಲಿಗೆ ಅರ್ಧ ಕಪ್ ಹುರುಳಿಕಾಳನ್ನು ಹುರಿದುಕೊಂಡು, ನಂತರ ಕುಕ್ಕರ್‌ನಲ್ಲಿ ಒಂದೂವರೆ ಕಪ್ ನೀರಿನಲ್ಲಿ ಹುರಿದ ಹುರುಳಿ ಕಾಳನ್ನು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಬೇಕು. ಮತ್ತೊಂದೆಡೆ ಟೊಮೆಟೊ, ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸು ಪುಡಿ ಸೇರಿಸಿ ಚೆನ್ನಾಗಿ ನುಣ್ಣನೆ ರುಬ್ಬಬೇಕು. ಈ ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹುರುಳಿಕಾಳಿನ ಜೊತೆ ಹಾಕಿ, ಉಪ್ಪು ಹಾಕಿ ಕುದಿಸಬೇಕು.
ಇದಕ್ಕೆ ಸಾಸಿವೆ, ಒಣ ಮೆಣಸು, ಇಂಗು, ಕರಿಬೇವಿನ ಎಲೆ ಒಗ್ಗರಣೆ ಹಾಕಿ. ಕೊನೆಗೆ ಸ್ವಲ್ಪ ಹುಣಸೆಹಣ್ಣಿನ ರಸ, ಸಕ್ಕರೆ, ನಿಂಬೆ ರಸ ಸೇರಿಸಿ ಕುದಿಸಿ ಇಳಿಸಿದರೆ ರುಚಿಕರವಾದ ಹುರುಳಿಕಾಳಿನ ಸಾರು ಸಿದ್ಧವಾಗುತ್ತದೆ.