ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಎಲವುಂತಿಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸರು ಚಿಕನ್ ಅಡುಗೆ ಮಾಡಿ ತಿಂದಿದ್ದಾರೆ. ಠಾಣೆಯನ್ನೇ ಅಡುಗೆ ಮನೆ ಮಾಡಿಕೊಂಡು ಚಿಕನ್ ಸಾಂಬಾರ್ ಮಾಡಿದ ಅಧಿಕಾರಿಗಳ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಅಧಿಕಾರಿಯೊಬ್ಬರು ಯುನಿಫಾರ್ಮ್ ಧರಿಸಿಯೇ ಚಿಕನ್ ತರಲು ಹೋಗುತ್ತಾರೆ, ನಂತರ ಠಾಣೆಯಲ್ಲಿ ಸಿಬ್ಬಂದಿಗಳೆಲ್ಲ ಕೂಡ ಚಿಕನ್ ಸಾಂಬಾರ್‌ಗೆ ಬೇಕಾದ ಪದಾರ್ಥಗಳನ್ನು ತಯಾರು ಮಾಡುತ್ತಾರೆ. ನಂತರ ಟಪಿಯೋಕಾ ಹಾಗೂ ಚಿಕನ್ ಕರಿ ಬೇಯಿಸಿದ್ದಾರೆ.
ಇದನ್ನು ವಿಡಿಯೋ ಮಾಡಿದ್ದು, ಅಮಲ್ ಸುಧಾಕರನ್ ಎನ್ನುವವರು ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಈವರೆಗೂ 9 ಮಿಲಿಯನ್‌ಗೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ವಿಡಿಯೋ ರೀತಿ ವಿಡಿಯೋ ಮಾಡಿದ್ದು, ನಾನಾ ರೀತಿಯ ಕಮೆಂಟ್‌ಗಳು ಬರುತ್ತಿವೆ.
https://www.instagram.com/reel/Cu4vWPLpsq5/?utm_source=ig_web_copy_link&igshid=MzRlODBiNWFlZA==