ಹೊಸ ದಿಗಂತ ವರದಿ, ಮುಂಡಗೋಡ:
ಹಳೆ ಮನೆಯ ಗೋಡೆಯನ್ನು ಕೆಡವುತ್ತಿರುವಾಗ ಮೈ ಮೇಲೆ ಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿ ಕಿಮ್ಸನಲ್ಲಿ ಸಾವನ್ನಪ್ಪಿದ್ದಾನೆ.
ಪಟ್ಟಣದ ಸುಭಾಶನಗರದ ಮಹ್ಮದಶರೀಪ ನೇರ್ತಿ(೩೪) ಎಂಬಾತ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು. ಇತನು ಬುಧವಾರ ದೇಶಪಾಂಡೆನಗರದ ಮಹ್ಮದಜಾಪರ ಎಂಬುವರ ಮನೆಯ ಗೋಡೆ ಕೆಡುತ್ತಿರುವಾಗ ಗೋಡೆ ಕುಸಿದು ಮೈಮೆಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದವನ್ನು ಮುಂಡಗೋಡ ತಾಲೂಕಾ ಆಸ್ಪತ್ರೇಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ಕರೆದೊಯ್ಯುಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.