ಏಕಾಏಕಿ ಬೋಟನ್ನೇ ಅಡಿಮೇಲು ಮಾಡಿದ ತಿಮಿಂಗಿಲ: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೃಹತ್ ಗಾತ್ರದ ತಿಮಿಂಗಿಲವೊಂದು ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಮೀನುಗಾರಿಕಾ ಬೋಟನ್ನು ಅಡಿಮೇಲು ಮಾಡಿದ ಘಟನೆ ಅಮೆರಿಕಾದ ನ್ಯೂ ಇಂಗ್ಲೆಂಡ್‌ನ ನ್ಯೂ ನ್ಯೂ ಹಂಪ್ಶೈರ್‌ ಸಮೀಪವಿರುವ ಪೋರ್ಟ್‌ಸ್ಮೂತ್‌ ಹರ್ಬರ್‌ ನಲ್ಲಿ ನಡೆದಿದೆ.

ಬೋಟು ಸಾಗುತ್ತಿದ್ದಾಗ ಒಮ್ಮೆಲೇ ತಿಮಿಂಗಿಲ ಮೇಲೇರಿ ಬಂದಿದ್ದು, ಪರಿಣಾಮ ಬೋಟ್ ತಲೆಕೆಳಗಾಗಿದೆ. ಬೋಟ್‌ನಲ್ಲಿದ್ದವರೆಲ್ಲೂ ಸಮುದ್ರಕ್ಕೆ ಬಿದ್ದಿದ್ದಾರೆ. ಸಮೀಪದಲ್ಲೇ ಇತರ ಬೋಟ್‌ಗಳಲ್ಲಿದ್ದ ಜನರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ನೀರಿನಿಂದ ಮೇಲೆದ್ದ ತಿಮಿಂಗಿಲ ಬೋಟ್‌ ಸಮೀಪದಲ್ಲೇ ಮೇಲೆ ಜಿಗಿದಿದ್ದು, ಇದರ ರಭಸಕ್ಕೆ ಬೋಟ್ ಅಡಿಮೇಲಾಗಿದೆ. ಈ ವೇಳೆ ಬೋಟ್‌ನಲ್ಲಿ ಇಬ್ಬರು ಇದ್ದು ಅವರು ಸಮುದ್ರಕ್ಕೆ ಬಿದ್ದಿದ್ದಾರೆ.

ಈ ಘಟನೆ ವೇಳೆ ಇನ್ನೊಂದು ಬೋಟ್‌ನಲ್ಲಿದ್ದ ಅವರು ಕೂಡಲೇ ತಮ್ಮ ಮೊಬೈಲ್‌ನಲ್ಲಿ ಈ ಭಯಾನಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಲ್ಲದೇ ಕೂಡಲೇ ಸಮುದ್ರಕ್ಕೆ ಬಿದ್ದ ಇತರ ಮೀನುಗಾರರ ನೆರವಿಗೆ ಧಾವಿಸಿದ್ದಾರೆ.

https://x.com/MariettaDaviz/status/1815834193470906499?ref_src=twsrc%5Etfw%7Ctwcamp%5Etweetembed%7Ctwterm%5E1815834193470906499%7Ctwgr%5E79fd04cfbb2fe1a38be116bd8f71582da8543236%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FMariettaDaviz%2Fstatus%2F1815834193470906499%3Fref_src%3Dtwsrc5Etfw

WMTW-TV ವರದಿಯ ಪ್ರಕಾರ, ಘಟನೆ ನಡೆಯುವ ವೇಳೆ ಬೋಟ್‌ನಲ್ಲಿದ್ದ ಓರ್ವ ನೀರಿಗೆ ಹಾರಿದ್ದರೆ, ಮತ್ತೊರ್ವ ಜಂಪ್ ಮಾಡಲು ಸಾಧ್ಯವಾಗದೆ, ಬೋಟ್ ಮಗುಚಿದ ನಂತರ ಕೂಡಲೇ ನೀರಿನ ಮೇಲ್ಭಾಗಕ್ಕೆ ಈಜುತ್ತಾ ಬಂದು ಪಾರಾಗಿದ್ದಾರೆ. ಘಟನೆಯಲ್ಲಿ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾದ ಕೋಸ್ಟ್ ಗಾರ್ಡ್‌ಗಳು ಕೂಡ ಎರಡು ಬೋಟ್‌ಗಳ ಸಿಬ್ಬಂದಿ ಕೂಡ ಯಾವುದೇ ಹಾನಿ ಇಲ್ಲದೇ ಪಾರಾಗಿದ್ದಾರೆ. ತಿಮಿಂಗಿಲ ಕೂಡ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!